ಸೈನಿಕರು ಪ್ರಯಾಣಿಸುತ್ತಿದ್ದ ಸೇನಾ ವಾಹನ ಪಲ್ಟಿ: ಮೂವರು ಸೈನಿಕರು ಸಾವು - BC Suddi
ಸೈನಿಕರು ಪ್ರಯಾಣಿಸುತ್ತಿದ್ದ ಸೇನಾ ವಾಹನ ಪಲ್ಟಿ: ಮೂವರು ಸೈನಿಕರು ಸಾವು

ಸೈನಿಕರು ಪ್ರಯಾಣಿಸುತ್ತಿದ್ದ ಸೇನಾ ವಾಹನ ಪಲ್ಟಿ: ಮೂವರು ಸೈನಿಕರು ಸಾವು

ರಾಜಸ್ಥಾನ: ರಾಜಸ್ಥಾನದ ಗಂಗನಗರ ಜಿಲ್ಲೆಯಲ್ಲಿ ಗುರುವಾರ ಬೆಳಗಿನ ಜಾವ ಪ್ರಯಾಣಿಸುತ್ತಿದ್ದ ಸೇನಾ ವಾಹನ ಪಲ್ಟಿ ಹೊಡೆದು ಬೆಂಕಿ ಕಾಣಿಸಿಕೊಂಡಿದ್ದರಿ0ದ ಮೂವರು ಸೈನಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮತ್ತು ಐವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಜಿಯಾಸರ್ ಪ್ರದೇಶದಲ್ಲಿ ಮಾ. 25ರ ಮುಂಜಾನೆ ಅಪಘಾತ ಸಂಭವಿಸಿದೆ ಎಂದು ಅವರು ಹೇಳಿದರು.

330ಆರ್ ಡಿ ಇಂದಿರಾನಗರ ಕಾಲನಿ ಸೂರತ್ಗರ್-ಚತ್ತರ್ ಗರ್ ರಸ್ತೆಯಲ್ಲಿ ಅಪಘಾತ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿದ ಜಿಪ್ಸಿ ಪಲ್ಟಿ ಆಗಿದೆ.ವಾಹನವು ಹಳ್ಳದಲ್ಲಿ ಉರುಳಿ ಬಿದ್ದು ಬೆಂಕಿ ಕಾಣಿಸಿಕೊಂಡಿದೆ.ಗಾಯಾಳುಗಳನ್ನು ಅಂಕಿತ್ ವಾಜಪೇಯಿ, ಉಮೇಶ್ ಯಾದವ್, ಆಶಿಶ್ ಕುಮಾರ್ ಓಜಾ ಮತ್ತು ಬಾಬ್ಲೂ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಭಟಿಂಡಾದ 47 ಶಸ್ತ್ರಸಜ್ಜಿತ ಘಟಕದವರು.

‘ಜಿಪ್ಸಿ ಪಲ್ಟಿಯಾಗಿ ಬೆಂಕಿ ಕಾಣಿಸಿಕೊಂಡಿದೆ. ಗಾಯಗೊಂಡ ಐವರು ಸೈನಿಕರು ವಾಹನದಿಂದ ಹೊರಬರಲು ಯಶಸ್ವಿಯಾದರು . ಆದರೆ ಮೂವರು ಅದರೊಳಗೆ ಸಿಕ್ಕಿಹಾಕಿಕೊಂಡು ಸಾವನ್ನಪ್ಪಿದ್ದಾರೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ‘ ಎಂದು ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ವಿಕ್ರಮ್ ತಿವಾರಿ ಹೇಳಿದ್ದಾರೆ.

 

error: Content is protected !!