ನನ್ನ ಮಗಳು ಒತ್ತಡದಲ್ಲಿದ್ದಾಳೆ ನಮ್ಮ ಮಗಳನ್ನು ಎರಡು ದಿನ ಫ್ರೀ ಮೈಂಡ್ ಆಗಿ ಇರುವುದಕ್ಕೆ ಅವಕಾಶ ಮಾಡಿಕೊಡಿಸಿ: ಯುವತಿ ಪೋಷಕರು - BC Suddi
ನನ್ನ ಮಗಳು ಒತ್ತಡದಲ್ಲಿದ್ದಾಳೆ ನಮ್ಮ ಮಗಳನ್ನು ಎರಡು ದಿನ ಫ್ರೀ ಮೈಂಡ್ ಆಗಿ ಇರುವುದಕ್ಕೆ ಅವಕಾಶ ಮಾಡಿಕೊಡಿಸಿ: ಯುವತಿ ಪೋಷಕರು

ನನ್ನ ಮಗಳು ಒತ್ತಡದಲ್ಲಿದ್ದಾಳೆ ನಮ್ಮ ಮಗಳನ್ನು ಎರಡು ದಿನ ಫ್ರೀ ಮೈಂಡ್ ಆಗಿ ಇರುವುದಕ್ಕೆ ಅವಕಾಶ ಮಾಡಿಕೊಡಿಸಿ: ಯುವತಿ ಪೋಷಕರು

ಬೆಳಗಾವಿ: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಪೋಷಕರು ಬೆಳಗಾವಿಯಲ್ಲಿ ದಿಢೀರ್ ಸುದ್ದಿಗೋಷ್ಠಿ ನಡೆಸಿದ್ದು, “ನನ್ನ ಮಗಳು ಒತ್ತಡದಲ್ಲಿದ್ದಾಳೆ ನಮ್ಮ ಮಗಳನ್ನು ಎರಡು ದಿನ ಫ್ರೀ ಮೈಂಡ್ ಆಗಿ ಇರುವುದಕ್ಕೆ ಅವಕಾಶ ಮಾಡಿಕೊಡಿಸಿ. ಆಕೆ ಒತ್ತಡದಲ್ಲಿ ನೀಡುವಂತಹ ಯಾವುದೇ ಹೇಳಿಕೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಬಾರದು ಎಂದು ಯುವತಿಯ ತಂದೆ ಮನವಿ ಮಾಡಿದ್ದಾರೆ.

 

ಡಿಕೆಶಿ ಕಡೆಯವರಿಂದ ನನ್ನ ಪುತ್ರಿಯನ್ನು ಕಾಪಾಡಿ, ಆಕೆಯನ್ನು ರಾಜಕೀಯ ದಾಳವಾಗಿ ಬಳಸಿದ್ದಾರೆ. ಮೊದಲು ನಮ್ಮ ಮಗಳು ಅಲ್ಲಿಂದ ಹೊರಬರಬೇಕು. ಆಕೆಯನ್ನು ಮೊದಲು ನಮಗೆ ಒಪ್ಪಿಸಿ ನಾಲ್ಕು ದಿನಗಳ ಕಾಲ ಆಕೆಯನ್ನು ನಮ್ಮ ಬಳಿಗೆ ಕಳುಹಿಸಿ. ಬಳಿಕ ಆಕೆ ನೀಡುವ ಹೇಳಿಕೆಗಳನ್ನು ಪಡೆದುಕೊಳ್ಳಿ. ನನ್ನ ಪುತ್ರಿ ನಮ್ಮ ಜತೆ ಇರುವುದಕ್ಕೆ ಬಯಸಿದರೆ ಬರಲಿ. ನಮ್ಮ ಜತೆಯಿರುವುದಕ್ಕೆ ಇಚ್ಛಿಸುವುದಿಲ್ಲ ಎಂದರೆ ಜಡ್ಜ್ ಮುಂದೆಯೇ ಹಾಜರಾಗಲಿ. ಅದಕ್ಕೂ ಮೊದಲು ಒತ್ತಡದಲ್ಲಿ ನಮ್ಮ ಮಗಳ ಹೇಳಿಕೆ ಪಡೆಯುವುದು ಬೇಡ ಎಂದು ಹೇಳಿದ್ದಾರೆ.

ನಮ್ಮ ಮಗಳನ್ನು ಸಿಡಿ ಗ್ಯಾಂಗ್ ಒತ್ತಡದಲ್ಲಿಟ್ಟಿದೆ. ನಮ್ಮ ಜೊತೆ ಮಾತನಾಡುವುದಕ್ಕೆ ನನ್ನ ಪುತ್ರಿಗೆ ಅವಕಾಶ ನೀಡುತ್ತಿಲ್ಲ.ನಮ್ಮ ಮಗಳನ್ನು ಒತ್ತಡದಿಂದ ಮೊದಲ ಕಾಪಾಡಿ ಎಂದು ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ಮನವಿ ಮಾಡುತ್ತೇವೆ ಎಂದು ಹೇಳಿದ್ದಾರೆ.

 

error: Content is protected !!