ಕೋವಿಡ್ ಮಹಾಸ್ಫೋಟ: ತಮ್ಮ ದೇಶಕ್ಕೆ ಮರಳಲು ಕ್ರಿಕೆಟರ್ ಪರದಾಟ - BC Suddi
ಕೋವಿಡ್ ಮಹಾಸ್ಫೋಟ: ತಮ್ಮ ದೇಶಕ್ಕೆ ಮರಳಲು ಕ್ರಿಕೆಟರ್ ಪರದಾಟ

ಕೋವಿಡ್ ಮಹಾಸ್ಫೋಟ: ತಮ್ಮ ದೇಶಕ್ಕೆ ಮರಳಲು ಕ್ರಿಕೆಟರ್ ಪರದಾಟ

ನವದೆಹಲಿ: ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸದಸ್ಯರಿಗೆ ಕೊರೊನಾ ದೃಢಪಟ್ಟ ಬೆನ್ನಲ್ಲೇ ಐಪಿಎಲ್ ರದ್ದುಗೊಳಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರುವಾಗಿತ್ತು. ಈಗಾಗಲೇ ಬಿಸಿಸಿಐ ಅನಿರ್ದಿಷ್ಟಾವಧಿವರೆಗೆ ಟೂರ್ನಿಯನ್ನು ಮುಂದೂಡಿದೆ. ಈ ಮಧ್ಯೆ ವಿದೇಶಿ ಆಟಗಾರರೊಬ್ಬರು ತಮ್ಮ ದೇಶಕ್ಕೆ ಮರಳಲು ಪರದಾಡುತ್ತಿದ್ದಾರೆ.

ಹೌದು. ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮೈಲ್ಕ್ ಸ್ಲೇಟರ್ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಮಧ್ಯೆ ಭಾರತದಿಂದ ಮಾಲ್ಡೀವ್ಸ್ ತಲುಪಿದ್ದಾರೆ. ಆದರೆ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ತಮ್ಮ ಆಟಗಾರರಿಗೆ ವಾಪಸಾತಿಗೆ ಅನುಮತಿ ನೀಡುತ್ತಿಲ್ಲ ಎಂದು ಮಾಜಿ ಆರಂಭಿಕ ಆಟಗಾರ ಸ್ಲೇಟರ್ ತೀವ್ರವಾಗಿ ಟೀಕಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸ್ಲೇಟರ್, “ನಮ್ಮ ಸರ್ಕಾರವು ಆಸ್ಟ್ರೇಲಿಯನ್ನರ ಸುರಕ್ಷತೆಯ ಬಗ್ಗೆ ಕಾಳಜಿಯನ್ನು ಹೊಂದಿದ್ದರೆ, ಅವರು ನಮಗೆ ಮನೆಗೆ ಮರಳಲು ಅವಕಾಶ ನೀಡುತ್ತಿದ್ದರು. ಇದು ಅವಮಾನ. ಪ್ರಧಾನ ಮಂತ್ರಿಯ ಕೈಗಳು ರಕ್ತದಿಂದ ಕೂಡಿದೆ. ನೀವು ನಮ್ಮನ್ನು ಈ ರೀತಿ ಹೇಗೆ ಪರಿಗಣಿಸಬಹುದು? ನಿಮ್ಮ ಕ್ವಾರಂಟೈನ್ ವ್ಯವಸ್ಥೆಗೆ ಏನಾಯಿತು. ಐಪಿಎಲ್‌ನಲ್ಲಿ ಕೆಲಸ ಮಾಡಲು ನನಗೆ ಸರ್ಕಾರದ ಅನುಮತಿ ಸಿಕ್ಕಿತ್ತು. ಆದರೆ ಈಗ ನಾನು ಸರ್ಕಾರದ ನಿರ್ಲಕ್ಷ್ಯವನ್ನು ಎದುರಿಸಬೇಕಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.