ಮುಂಬೈ: ಕೋವಿಡ್ ಗೆ ವೈದ್ಯೆ ಬಲಿ : ಸಾವಿಗೂ ಮುನ್ನ ಮಾಡಿದ ಪೋಸ್ಟ್ ಮನಕಲಕುವಂತಿದೆ - BC Suddi
ಮುಂಬೈ: ಕೋವಿಡ್ ಗೆ ವೈದ್ಯೆ ಬಲಿ : ಸಾವಿಗೂ ಮುನ್ನ ಮಾಡಿದ ಪೋಸ್ಟ್ ಮನಕಲಕುವಂತಿದೆ

ಮುಂಬೈ: ಕೋವಿಡ್ ಗೆ ವೈದ್ಯೆ ಬಲಿ : ಸಾವಿಗೂ ಮುನ್ನ ಮಾಡಿದ ಪೋಸ್ಟ್ ಮನಕಲಕುವಂತಿದೆ

ಮುಂಬೈ: ಡೆಡ್ಲಿ ಸೋಂಕು ರಕ್ತ ಹಿರುತ್ತಿದೆ. ಸಂಬಂಧಿಕರಿದ್ದರು ಅನಾಥರಾಗಿ ಸಾಯುವ ಸ್ಥಿತಿ ಕಣ್ಣ ಮುಂದೆಯೇ ಇದೆ. ಸದ್ಯಕ್ಕೆ ಸೋಂಕು ತಡೆಗೆ ಶ್ರಮಿಸುತ್ತಿರುವ ವೈದ್ಯರು ಇದೇ ಸೋಂಕಿನ ಕೈಯಲ್ಲಿ ಸಿಕ್ಕು ಸಾವನಪ್ಪುತ್ತಿದ್ದಾರೆ. ಸದ್ಯ ಮುಂಬೈನ 51 ವರ್ಷದ ವೈದ್ಯೆ ಸೋಂಕಿನಿಂದ ಸಾವನಪ್ಪಿದ್ದು ಸಾಯುವ ಮುನ್ನ ಅವರು ಪೋಸ್ಟ್ ಮಾಡಿದ ಫೇಸ್ ಬುಕ್ ಸಂದೇಶ ಮನಕಲಕುವಂತಿದೆ.

ಮುಂಬೈನ ಸೆವ್ರಿ ಟಿಬಿ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ. ಮನಿಶಾ ಜಾಧವ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಬಹುಶಃ ಇದೇ ನನ್ನ ಕೊನೆಯ ಶುಭೋದಯ ಅನಿಸುತ್ತದೆ. ಈ ವೇದಿಕೆಯಲ್ಲಿ ನಿಮ್ಮನ್ನು ಇನ್ನು ಮುಂದೆ ಭೇಟಿ ಮಾಡುವುದಿಲ್ಲ ಅನಿಸುತ್ತಿದೆ. ಎಲ್ಲರೂ ಎಚ್ಚರಿಕೆ ವಹಿಸಿ. ದೇಹ ಮಾತ್ರ ಸಾಯುತ್ತದೆ. ಆತ್ಮ ಎಂದಿಗೂ ಸಾಯುವುದಿಲ್ಲ. ಆತ್ಮ ಅಮರ ಎಂದು ಬರೆದುಕೊಂಡಿದ್ದಾರೆ.

ಡಾ. ಮನೀಶಾ ಅವರು ಕ್ಲಿನಿಕಲ್ ಮತ್ತು ಆಡಳಿತಾತ್ಮಕ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸುವುದರಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಸಿವಿಕ್ ಹೆಲ್ತ್ ಸೆಟಪ್ ನ ಸೋಂಕಿನಿಂದ ಸಾವಿಗೀಡಾದ ಮೊದಲ ವೈದ್ಯರಾಗಿದ್ದಾರೆ.