ಬಾಗಲಕೋಟೆ: ಜಿಲ್ಲಾದ್ಯಂತ ಕೋವಿಡ್ ಭಯ: ಆಕ್ಸಿಜನ್ ಕೊರತೆ ನಡುವೆ ಇದೀಗ ರಕ್ತದ ಕೊರತೆ - BC Suddi
ಬಾಗಲಕೋಟೆ: ಜಿಲ್ಲಾದ್ಯಂತ ಕೋವಿಡ್ ಭಯ: ಆಕ್ಸಿಜನ್ ಕೊರತೆ ನಡುವೆ ಇದೀಗ ರಕ್ತದ ಕೊರತೆ

ಬಾಗಲಕೋಟೆ: ಜಿಲ್ಲಾದ್ಯಂತ ಕೋವಿಡ್ ಭಯ: ಆಕ್ಸಿಜನ್ ಕೊರತೆ ನಡುವೆ ಇದೀಗ ರಕ್ತದ ಕೊರತೆ

ಬಾಗಲಕೋಟೆ: ಜಿಲ್ಲಾದ್ಯಂತ ಕೋವಿಡ್ ಭಯ ಎಲ್ಲರನ್ನೂ ಬೆಂಬಿಡದೇ ಕಾಡುತ್ತಿದೆ. ಆಕ್ಸಿಜನ್ ಕೊರತೆ ನಡುವೆ ಇದೀಗ ರಕ್ತದ ಕೊರತೆಯೂ ಕಾಡುತ್ತಿದೆ. ಜಿಲ್ಲೆಯಲ್ಲಿ ಕೋವಿಡ್ ಮತ್ತು ಇತರ ಚಿಕಿತ್ಸೆಗಾಗಿ ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಜನರು ಸರದಿಯಲ್ಲಿ ನಿಲ್ಲುತ್ತಿದ್ದಾರೆ.

ಜಿಲ್ಲೆಯಷ್ಟೇ ಅಲ್ಲದೇ, ಅಕ್ಕಪಕ್ಕದ ಗದಗ, ಕೊಪ್ಪಳ, ವಿಜಯಪುರ, ರಾಯಚೂರು ಗಡಿಭಾಗದ ಜನರು ಆಗಮಿಸುತ್ತಿದ್ದಾರೆ. ಬೆಡ್‌ಗಳ ಕೊರತೆ ನಿಭಾಯಿಸುವುದು ದೊಡ್ಡ ಸವಾಲು ಆಗಿದೆ. ಇದರ ನಡುವೆ ರಕ್ತ ಭಂಡಾರಗಳಲ್ಲಿ ರಕ್ತ ಶೇಖರಣೆ ಕುಸಿತವಾಗಿರುವುದು ಮತ್ತಷ್ಟು ಆತಂಕ ಮೂಡಿಸಿದೆ.

ಕೊರೊನಾ ವೈರಸ್: ಮೂರನೇ ಅಲೆಯ ಬಗ್ಗೆ ಭಯಾನಕ ಮಾಹಿತಿ ಬಿಚ್ಚಿಟ್ಟ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್​ ತೋಪೆ