ಯಾವೆಲ್ಲಾ ದೇಶಗಳು ಕೋವಿಡ್ ಲಸಿಕೆಯನ್ನು ಸ್ಥಗಿತಗೊಳಿಸಿದವು ಗೊತ್ತಾ..? - BC Suddi
ಯಾವೆಲ್ಲಾ ದೇಶಗಳು ಕೋವಿಡ್ ಲಸಿಕೆಯನ್ನು ಸ್ಥಗಿತಗೊಳಿಸಿದವು ಗೊತ್ತಾ..?

ಯಾವೆಲ್ಲಾ ದೇಶಗಳು ಕೋವಿಡ್ ಲಸಿಕೆಯನ್ನು ಸ್ಥಗಿತಗೊಳಿಸಿದವು ಗೊತ್ತಾ..?

ಲಂಡನ್: ಅಸ್ಟ್ರಾಜೆನೆಕಾ ಕೋವಿಡ್ ಲಸಿಕೆಯನ್ನು ಸ್ಥಗಿತಗೊಳಿಸಿದ ದೇಶಗಳ ಸಾಲಿಗೆ ಜರ್ಮನಿ, ಇಟಲಿ, ಫ್ರಾನ್ಸ್ಸೇರ್ಪಡೆಯಾಗಿದೆ. ಈ ಮೊದಲು ಸ್ಪೇನ್, ಪೋರ್ಚುಗಲ್, ಸ್ಲೊವೇನಿಯಾ ಮತ್ತು ಲಾಟ್ವಿಯಾ ದೇಶಗಳು ಈ ಲಸಿಕೆ ನೀಡುವುದನ್ನು ನಿಲ್ಲಿಸಿದ್ದವು.

ವಿಶ್ವ ಆರೋಗ್ಯ ಸಂಸ್ಥೆಯು ಅಸ್ಟ್ರಾಜೆನೆಕಾ ಲಸಿಕೆಗೆ ಸಮ್ಮತಿ ಸೂಚಿಸಿದ ಹೊರತಾಗಿಯೂ ಲಸಿಕೆ ನೀಡಲಾದವರಲ್ಲಿ ರಕ್ತಹೆಪ್ಪುಗಟ್ಟುವ ಲಕ್ಷಣಗಳು, ಜ್ವರ, ಎದೆನೋವು ಕಂಡುಬ0ದಿದೆಯೆನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರು, ಭಯ ಬೀಳುವ ಅಗತ್ಯವಿಲ್ಲ.

ಇಂತಹ ಲಕ್ಷಣಗಳು, ಆರೋಗ್ಯದಲ್ಲಿನ ಏರುಪೇರುಗಳು ಕೆಲವರಲ್ಲಷ್ಟೇ ಕಂಡು ಬರುವುದು ಎಂದಿದ್ದಾರೆ. ಈ ಹೊಸ ವಿದ್ಯಮಾನವು ವಿಶ್ವಾದ್ಯಂತ ಹತ್ತು ಹಲವು ವೈದ್ಯಕೀಯವ ಸಂಸ್ಥೆಗಳು ಜಿದ್ದಿಗೆ ಬಿದ್ದಂತೆ ತಯಾರಿಸುತ್ತಿರುವ ಕೋವಿಡ್ ಲಸಿಕೆಗಳ ದಕ್ಷತೆಯ ಕುರಿತಾಗಿ ಸಂದೇಹ ಪಡುವಂತಾಗಿದೆ.

error: Content is protected !!