ರಮೇಶ್ ಜಾರಕಿಹೊಳಿಗೆ ಕೋವಿಡ್ ಸೋಂಕು: ಖಚಿತಪಡಿಸಿದ ವೈದಾಧಿಕಾರಿ - BC Suddi
ರಮೇಶ್ ಜಾರಕಿಹೊಳಿಗೆ ಕೋವಿಡ್ ಸೋಂಕು: ಖಚಿತಪಡಿಸಿದ ವೈದಾಧಿಕಾರಿ

ರಮೇಶ್ ಜಾರಕಿಹೊಳಿಗೆ ಕೋವಿಡ್ ಸೋಂಕು: ಖಚಿತಪಡಿಸಿದ ವೈದಾಧಿಕಾರಿ

ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಕೋವಿಡ್ ಪಾಸಿಟಿವ್ ಹಿನ್ನೆಲೆ ಗೋಕಾಕ ತಾಲೂಕು ಮುಖ್ಯ ವೈದ್ಯಾಧಿಕಾರಿ ರವೀಂದ್ರ ಅಂಟಿನ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಗುರುವಾರ ರಾತ್ರಿ ಅವರು ಬೇರೆ ರಾಜ್ಯದ ಟ್ರಾವಲ್ ಹಿಸ್ಟರಿ ಇಂದ ರಮೇಶ್ ಬಂದಿದ್ದರು. ನಿನ್ನೆ ರಾತ್ರಿ ಅವರನ್ನ ಕೋವಿಡ್ ತಪಾಸಣೆಗೆ ಒಳಪಡಿಸಲಾಗಿತ್ತು. ಈ ವೇಳೆ ಅವರಿಗೆ ಕೊರೊನಾ ಸೋಂಕು ತಗುಲಿರುವುದು ಕಂಡು ಬಂದಿದೆ ಎಂದು ಅಂಟಿನ್ ತಿಳಿಸಿದ್ದಾರೆ.

ಶುಗರ್ ಮತ್ತು ಬಿಪಿ ಹೆಚ್ಚಾಗಿದ್ದರಿಂದ ಅವರನ್ನ ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡುತ್ತಿದ್ದೇವೆ.ಅವರು ಇನ್ನೂ ಮೂರು ನಾಲ್ಕು ದಿನ ಐಸಿಯುನಲ್ಲಿ ಇರಬೇಕಾಗುತ್ತದೆ. ಕೋವಿಡ್ ವಾರ್ಡ್ ನಲ್ಲಿರುವ ಐಸಿಯೂ ನಲ್ಲಿ ರಮೇಶ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯಾಧಿಕಾರಿ ರವೀಂದ್ರ ಅಂಟಿನ್ ತಿಳಿಸಿದ್ದಾರೆ.

ದಾಳಿ ಸಂದರ್ಭ ನಾಪತ್ತೆಯಾಗಿದ್ದ ಸಿಆರ್‌ಪಿಎಫ್‌ ಯೋಧ ಮಾವೋವಾದಿಗಳ ವಶದಲ್ಲಿ

error: Content is protected !!