ಎರಡನೇ ಡೋಸ್‌ ಲಸಿಕೆ ಪಡೆದ 28 ದಿನದಲ್ಲಿ ಚಾಮರಾಜನಗರ ಡಿಸಿಗೆ ಕೊರೊನಾ ದೃಢ.! - BC Suddi
ಎರಡನೇ ಡೋಸ್‌ ಲಸಿಕೆ ಪಡೆದ 28 ದಿನದಲ್ಲಿ ಚಾಮರಾಜನಗರ ಡಿಸಿಗೆ ಕೊರೊನಾ ದೃಢ.!

ಎರಡನೇ ಡೋಸ್‌ ಲಸಿಕೆ ಪಡೆದ 28 ದಿನದಲ್ಲಿ ಚಾಮರಾಜನಗರ ಡಿಸಿಗೆ ಕೊರೊನಾ ದೃಢ.!

ಮೈಸೂರು: ಎರಡನೇ ಡೋಸ್‌ ಕೊರೊನಾ ಲಸಿಕೆ ಪಡೆದ  28 ದಿನಗಳ ಬಳಿಕ ಚಾಮರಾಜಾನಗರ ಜಿಲ್ಲಾಧಿಕಾರಿ ಎಂ.ಆರ್.ರವಿಯವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಸಾರ್ವಜನರಿಕರಲ್ಲಿ ಮತ್ತಷ್ಟು ಗೊಂದಲ ಮೂಡಿಸಿದೆ. 

ಶನಿವಾರ ಜಿಲ್ಲಾಧಿಕಾರಿ ಅವರಿಗೆ ಕೊರೊನಾ ಸೋಂಕು ಲಕ್ಷಣಗಳು ಕಂಡು ಬಂದಿದ್ದು ಈ ಹಿನ್ನೆಲೆ ಆರ್‌ಟಿ-ಪಿಸಿಆರ್‌ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಭಾನುವಾರ ಇದರ ವರದಿ ಬಂದಿದ್ದು ಪಾಸಿಟಿವ್‌ ಆಗಿದೆ ಎಂದು ಚಾಮರಾಜಾಗರ ಜಿಲ್ಲಾ ಡಿಎಚ್‌ಒ ಎಂಸಿ ರವಿ ತಿಳಿಸಿದ್ದಾರೆ. ಹಾಗೆಯೇ ಕೊರೊನಾ ಲಸಿಕೆ ಪಡೆದ ಬಳಿಕ ಅದು ದೇಹದಲ್ಲಿ ತನ್ನ ಕಾರ್ಯ ಆರಂಭಿಸಬೇಕಾದರೆ ಒಂದು ತಿಂಗಳು ಬೇಕಾಗುತ್ತದೆ ಎಂದು ಹೇಳಿದ್ದಾರೆ.

ಜಿಲ್ಲಾಧಿಕಾರಿ ಎಂ.ಆರ್.ರವಿ ಅವರು ಫೆಬ್ರವರಿ 9ರಂದು ಮೊದಲ ಡೋಸ್‌ ಕೋವಿಶೀಲ್ಡ್ ಲಸಿಕೆಯನ್ನು ಹಾಕಿಸಿಕೊಂಡಿದ್ದರು. ಮಾರ್ಚ್ 8ರಂದು ಎರಡನೇ ಡೋಸ್‌ ಹಾಕಿಸಿಕೊಂಡಿದ್ದರು. ಲಸಿಕೆ ತೆಗೆದುಕೊಂಡು ಪ್ರಸ್ತುತ 28 ದಿನಗಳಾಗಿದ್ದು ಈಗ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸದ್ಯ ಅವರು ಹೋ ಐಸೋಲೇಷನ್‌ನಲ್ಲಿ ಇದ್ದಾರೆ ಎಂದು ವರದಿಯಾಗಿದೆ.

 

ಭಾರತದ ಪ್ರಥಮ ಮಹಿಳಾ ಕ್ರಿಕೆಟ್ ಕಮೆಂಟೇಟರ್ ಚಂದ್ರಾ ನಾಯ್ಡು ವಿಧಿವಶ

error: Content is protected !!