ಎ.15ರವರೆಗೆ ಕೊರೊನಾ ಹೆಚ್ಚಾಗುವ ಸಾಧ್ಯತೆ, ಮುಂಜಾಗ್ರತಾ ಕ್ರಮ ಅಗತ್ಯ : ಡಿ.ವಿ.ಸದಾನಂದ ಗೌಡ - BC Suddi
ಎ.15ರವರೆಗೆ ಕೊರೊನಾ ಹೆಚ್ಚಾಗುವ ಸಾಧ್ಯತೆ, ಮುಂಜಾಗ್ರತಾ ಕ್ರಮ ಅಗತ್ಯ : ಡಿ.ವಿ.ಸದಾನಂದ ಗೌಡ

ಎ.15ರವರೆಗೆ ಕೊರೊನಾ ಹೆಚ್ಚಾಗುವ ಸಾಧ್ಯತೆ, ಮುಂಜಾಗ್ರತಾ ಕ್ರಮ ಅಗತ್ಯ : ಡಿ.ವಿ.ಸದಾನಂದ ಗೌಡ

ಬೆಂಗಳೂರು: “ಕೊರೊನಾ ಸೋಂಕು ಎಪ್ರಿಲ್‌ 15ರ ವೇಳೆಗೆ ತೀವ್ರವಾಗುವ ಸಾಧ್ಯತೆ ಇದ್ದು, ಪ್ರತಿಯೋರ್ವರು ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಉತ್ತಮ” ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ.

ಬೆಂಗಳೂರಿನ ಮತ್ತಿಕೆರೆಯಲ್ಲಿಂದು ನೂತನವಾಗಿ ಸ್ಥಾಪಿತವಾದ ರಾಜ್ಯ ವಿವಿಧ ಕಾರ್ಮಿಕ ಸಮನ್ವಯ ಸಮಿತಿಯ ಚಾಲನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, “ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಕೊರೊನಾದ ಎರಡನೇ ಅಲೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆ ಸರ್ಕಾರ ಕೆಲವು ನಿಯಮಗಳನ್ನು ಜಾರಿ ಮಾಡಿದೆ. ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಯುವಜನತೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊರೊನಾ ಸೋಂಕು ಕಂಡುಬರುತ್ತಿದ್ದು, ಈ ಬಗ್ಗೆ ವರದಿ ಇದೆ. ಸರ್ಕಾರದ ನಿಯಮಾವಳಿಗಳನ್ನು ಯುವಜನತೆ ಕಡ್ಡಾಯವಾಗಿ ಪಾಲಿಸಬೇಕು” ಎಂದಿದ್ದಾರೆ.

“ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೊರೊನಾದಂತಹ ಸಮಯದಲ್ಲಿ ಕಾರ್ಮಿಕರಿಗೆ ಪೂರಕವಾಗಿರುವ ಅನೇಕ ಕಾರ್ಯಗಳನ್ನು ಜಾರಿಗೆ ತಂದಿದೆ. ಕಾರ್ಮಿಕರ ಯೋಗಕ್ಷೇಮವೇ ನಮ್ಮ ಗುರಿ” ಎಂದು ತಿಳಿಸಿದ್ದಾರೆ.

error: Content is protected !!