ಕೋವಿಡ್ 19 ವೈರಸ್ ಪಾಸಿಟಿವ್ ಬಂದ ರೋಗಿಗಳಲ್ಲಿ ವೈರಸ್ ಯಾವಾಗ ಸಾಯುತ್ತದೆ ಗೊತ್ತಾ? - BC Suddi
ಕೋವಿಡ್ 19 ವೈರಸ್ ಪಾಸಿಟಿವ್ ಬಂದ ರೋಗಿಗಳಲ್ಲಿ ವೈರಸ್ ಯಾವಾಗ ಸಾಯುತ್ತದೆ ಗೊತ್ತಾ?

ಕೋವಿಡ್ 19 ವೈರಸ್ ಪಾಸಿಟಿವ್ ಬಂದ ರೋಗಿಗಳಲ್ಲಿ ವೈರಸ್ ಯಾವಾಗ ಸಾಯುತ್ತದೆ ಗೊತ್ತಾ?

ನವದೆಹಲಿ: ದೇಶದಲ್ಲಿ ಕೊರೊನಾ ಕಾಟ ಹೆಚ್ಚಾಗಿದೆ. ಇನ್ನು ಕೋವಿಡ್ 19 ವೈರಸ್ ಪಾಸಿಟಿವ್ ಬಂದು, ಮೆದು ಲಕ್ಷಣ ಹಾಗೂ ಲಕ್ಷಣ ರಹಿತ ಇರುವ ರೋಗಿಗಳಲ್ಲಿ ವೈರಸ್ 7 ರಿಂದ 8 ದಿನಗಳಲ್ಲಿ ಸಾಯುತ್ತದೆ ಎಂದು ದೆಹಲಿ ಏಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾ ಅವರು ಹೇಳಿದ್ದಾರೆ.

ವೈರಸ್ ನ ಈ ವೇಳೆಯಲ್ಲಿ ಸೋಂಕು ಬೇರೆಯವರಿಗೆ ಹರಡುವುದು ತುಂಬಾ ವಿರಳ. ಆದರೆ, ಮೃತ ಕೊರೊನಾ ಕಣಗಳು ಆರ್ ಟಿ ಪಿಸಿಆರ್ ಟೆಸ್ಟ್ ನಲ್ಲಿ ಪಾಸಿಟಿವ್ ಬರಬಹುದು ಎಂದು ಗುಲೇರಿಯಾ ಹೇಳಿದ್ದಾರೆ. ಕೋವಿಡ್ ಕಾಣಿಸಿಕೊಂಡು ಮೆದು ಹಾಗೂ ಲಕ್ಷಣರಹಿತ ರೋಗಿಗಳು ಹೋಮ್ ಐಸೋಲೇಷನ್ ನಂತರ ಮತ್ತೆ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದಿದ್ದಾರೆ.

ಇದರ ನಡುವೆ ಕೇಂದ್ರ ಸರ್ಕಾರ ಮತ್ತೆ ಶುಕ್ರವಾರ ಹೋಮ್ ಐಸೋಲೇಷನ್ ಬಗ್ಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಕೋವಿಡ್ ಕಾಣಿಸಿಕೊಂಡ ನಂತರ ರೋಗಿ ಹತ್ತು ದಿನ ಐಸೋಲೇಷನ್ ನಲ್ಲಿ ಇರಬೇಕು ಎಂದು ಹೇಳಿದೆ.

ರಾಜ್ಯದಲ್ಲಿ ಕೆಲವು ನಿರ್ಬಂಧ ಮತ್ತು ನೈಟ್ ಕರ್ಫ್ಯೂ ಜಾರಿಮಾಡಲಾಗಿದಿಯೇ ಹೊರತು ಇದು ಲಾಕ್ ಡೌನ್ ಅಲ್ಲ : ಬೊಮ್ಮಾಯಿ