ಬೆಂಗಳೂರು : ಕೇರಳದ ಗಡಿ ಮುಚ್ಚಿರುವುದು ಕೇಂದ್ರ ಸರ್ಕಾರದ ನಿಯಮ ಉಲ್ಲಂಘನೆ ಎಂದು ಹೇಳಿದೆ. ಈ ರೀತಿಯಾಗಿ ರಸ್ತೆ ಮುಚ್ಚುವುದು ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ನಿಯಮ ಉಲ್ಲಂಘನೆ, ಅದಕ್ಕೆ ಬದಲಾಗಿ ವ್ಯಕ್ತಿಗಳ ಕೊರೊನಾ ಪರೀಕ್ಷೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ. ಕೋವಿಡ್ 19 ಸೋಂಕಿನ ಹಿನ್ನೆಲೆ ಕೇರಳದ ಗಡಿ ಬಂದ್ ಮಾಡಿರುವ ರಾಜ್ಯ ಸರ್ಕಾರದ ನಿಲುವನ್ನು ಪ್ರಶ್ನಿಸಿ ಪಿಐಎಲ್ ವಿಚಾರಣೆ ಇಂದು ಹೈಕೋರ್ಟ್ ನಡೆದಿದೆ.

ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಸಾರ್ವಜನಿಕರ ಓಡಾಟಕ್ಕೆ ನಿರ್ಬಂಧ ಇಲ್ಲ ಎಂದು ಹೈಕೋರ್ಟ್ ಪೀಠ ತಿಳಿಸಿದೆ. ಕೋವಿಡ್ 19 ಸೋಂಕಿನ ಹಿನ್ನೆಲೆ ಕೇರಳದ ಗಡಿ ಬಂದ್ ಮಾಡಿರುವ ರಾಜ್ಯ ಸರ್ಕಾರದ ನಿಲುವನ್ನು ಪ್ರಶ್ನಿಸಿ ಗಡಿ ಭಾಗದ ಕೆಲವು ಜನರು ಪಿಐಎಲ್ ಸಲ್ಲಿಕೆ ಮಾಡಿದ್ದರು. ಈ ಮೂಲಕ ಇದರ ವಿಚಾರಣೆ ನಡೆದಿದೆ.