ಮನೆಯಲ್ಲೇ ಲಸಿಕೆ ಪಡೆದಿದ್ದು ಬಿ.ಸಿ.ಪಾಟೀಲ್; ಅಧಿಕಾರಿ ಅಮಾನತು ಬಿಸಿ - BC Suddi
ಮನೆಯಲ್ಲೇ ಲಸಿಕೆ ಪಡೆದಿದ್ದು ಬಿ.ಸಿ.ಪಾಟೀಲ್; ಅಧಿಕಾರಿ ಅಮಾನತು ಬಿಸಿ

ಮನೆಯಲ್ಲೇ ಲಸಿಕೆ ಪಡೆದಿದ್ದು ಬಿ.ಸಿ.ಪಾಟೀಲ್; ಅಧಿಕಾರಿ ಅಮಾನತು ಬಿಸಿ

ಹಾವೇರಿ: ಕೃಷಿ ಸಚಿವ ಬಿ. ಸಿ. ಪಾಟೀಲ್ ಆಸ್ಪತ್ರೆಗೆ ತೆರಳದೇ ಮನೆಯಲ್ಲಿಯೇ ಕೊರೊನಾ ವೈರಸ್ ಲಸಿಕೆ ಪಡೆದಿದ್ದರು. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕು ಆರೋಗ್ಯಾಧಿಕಾರಿಗೆ ಅಮಾನತು ಬಿಸಿ ಮುಟ್ಟಿಸಲಾಗಿದೆ.

ಬಿ. ಸಿ. ಪಾಟೀಲ್ ಅವರು ಹಿರೆಕೇರೂರಿನ ನಿವಾಸದಲ್ಲಿಯೇ ಮಾರ್ಚ್ 2ರಂದು ಕೋವಿಡ್ ಲಸಿಕೆ ಪಡೆದಿದ್ದರು. ಈ ಕುರಿತು ಭಾರೀ ಚರ್ಚೆ ನಡೆದಿತ್ತು. ಈ ಸಂಬಂಧಿಸಿದಂತೆ ತಾಲೂಕು ಆರೋಗ್ಯಾಧಿಕಾರಿ ಝೆಡ್. ಆರ್. ಮಕಾನದಾರ್ ಅಮಾನತುಗೊಳಿಸಿ ಭಾರತೀಯ ಆರೋಗ್ಯ ಸೇವಾ ಆಯುಕ್ತ ಕೆ.ವಿ. ತ್ರಿಲೋಕಚಂದ್ರ ಆದೇಶ ಹೊರಡಿಸಿದ್ದಾರೆ.

ಸಾರ್ವಜನಿಕರು ಕೊರೊನಾ ಹರಡುವಿಕೆಯನ್ನು ನಿರ್ಲಕ್ಷಿಸಿಬಾರದು: ಸಚಿವ ಜಗದೀಶ ಶೆಟ್ಟರ್

error: Content is protected !!