ಕೋವಿಡ್ ಮಾರ್ಗಸೂಚಿ ಉಲ್ಲಂಘನೆ : ಅವರಿಗೆ ಕೋಳಿ ನಡಿಗೆ ಶಿಕ್ಷೆ ವಿಧಿಸಿದ ಮುಂಬೈ ಪೊಲೀಸ್‌ ಅಧಿಕಾರಿಗಳು - BC Suddi
ಕೋವಿಡ್ ಮಾರ್ಗಸೂಚಿ  ಉಲ್ಲಂಘನೆ :  ಅವರಿಗೆ ಕೋಳಿ ನಡಿಗೆ ಶಿಕ್ಷೆ ವಿಧಿಸಿದ ಮುಂಬೈ ಪೊಲೀಸ್‌ ಅಧಿಕಾರಿಗಳು

ಕೋವಿಡ್ ಮಾರ್ಗಸೂಚಿ ಉಲ್ಲಂಘನೆ : ಅವರಿಗೆ ಕೋಳಿ ನಡಿಗೆ ಶಿಕ್ಷೆ ವಿಧಿಸಿದ ಮುಂಬೈ ಪೊಲೀಸ್‌ ಅಧಿಕಾರಿಗಳು

ಮುಂಬೈ:’ಕೊರೊನಾ ಭೀತಿ ಹಿನ್ನೆಲೆಯಲ್ಲಿ ಸಮುದ್ರಕ್ಕೆ ಕಾಲಿಡಲು ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದೆ. ಹೀಗಿದ್ದರೂ ಸಮುದ್ರ ತೀರದಿಂದ ನೀರಿನ ಒಳಭಾಗದವರೆಗೆ ಓಡಿ, ಅಲೆಗಳೊಂದಿಗೆ ಆಡಲು ಐವರು ಮುಂದಾಗಿದ್ದರು. ಇವರ್ಯಾರೂ ಮುಖಕ್ಕೆ ಮಾಸ್ಕ್ ಧರಿಸಿರಲಿಲ್ಲ.

ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ ಮರೈನ್‌ ಡ್ರೈವ್‌ನಲ್ಲಿ ಸಮುದ್ರ ಪ್ರವೇಶಿಸಲು ಮುಂದಾಗಿದ್ದ ಐವರಿಗೆ ಪೊಲೀಸರು ಕೋಳಿ ನಡಿಗೆ (ಮುರ್ಗ ವಾಕ್‌) ಶಿಕ್ಷೆ ನೀಡಿದ ವಿಡಿಯೊ ವೈರಲ್‌ ಆಗಿದೆ. ಈ ಕಾರಣಕ್ಕಾಗಿ ಅವರಿಗೆ ಮರೈನ್‌ ಡ್ರೈವ್‌ನ ರಸ್ತೆಯಲ್ಲಿ ಕೋಳಿ ನಡಿಗೆ ಶಿಕ್ಷೆ ವಿಧಿಸಲಾಗಿತ್ತು’ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

 

error: Content is protected !!