ಮದುವೆ ಮಂಟಪದಿಂದ ಮತಗಟ್ಟೆಗೆ ತೆರಳಿದ ದಂಪತಿ:ಹೊಸ ಜೋಡಿಯ ಕರ್ತವ್ಯ ಪ್ರಜ್ಞೆಗೆ ಗ್ರಾಮಸ್ಥರ ಮೆಚ್ಚುಗೆ - BC Suddi
ಮದುವೆ ಮಂಟಪದಿಂದ ಮತಗಟ್ಟೆಗೆ ತೆರಳಿದ ದಂಪತಿ:ಹೊಸ ಜೋಡಿಯ ಕರ್ತವ್ಯ ಪ್ರಜ್ಞೆಗೆ ಗ್ರಾಮಸ್ಥರ ಮೆಚ್ಚುಗೆ

ಮದುವೆ ಮಂಟಪದಿಂದ ಮತಗಟ್ಟೆಗೆ ತೆರಳಿದ ದಂಪತಿ:ಹೊಸ ಜೋಡಿಯ ಕರ್ತವ್ಯ ಪ್ರಜ್ಞೆಗೆ ಗ್ರಾಮಸ್ಥರ ಮೆಚ್ಚುಗೆ

ಬೆಳಗಾವಿ ತಾಲೂಕು ಬಿಜಗರ್ಣಿಯಲ್ಲಿ ಹೊಸದಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಯುವ ಜೋಡಿಯೊಂದು ಮದುವೆ ಮಂಟಪದಿಂದ ನೇರವಾಗಿ ಮತಗಟ್ಟೆಗೆ ತೆರಳಿ ಹಕ್ಕು ಚಲಾಯಿಸಿದರು.

ಬೆಳಗಾವಿ ತಾಲೂಕು ಬಿಜಗರ್ಣಿ ಗ್ರಾಮದಲ್ಲಿ ಸುಮೀತ ಅಷ್ಟೇಕರ್ ವಿವಾಹ ನಡೆಯಿತು. ಮದುವೆ ಮುಗಿಯುತ್ತಲೇ ಮತಗಟ್ಟೆಗೆ ಧಾವಿಸಿದ ಸುಮೀತ ಅಷ್ಟೇಕರ್ ದಂಪತಿ ತಮ್ಮ ಹಕ್ಕು ಚಲಾಯಿಸಿ ಕರ್ತವ್ಯ ಪ್ರಜ್ಞೆ ಮೆರೆದರು. ಮದುವೆ ಡ್ರೆಸ್‍ನಲ್ಲೇ ಮತಗಟ್ಟೆಗೆ ಬಂದ ದಂಪತಿಗೆ ಮತಗಟ್ಟೆ ಸಿಬ್ಬಂದಿ ಶುಭ ಹಾರೈಸುತ್ತಲೇ ಮತದಾನಕ್ಕೆ ಅವಕಾಶ ಮಾಡಿಕೊಟ್ಟರು.

ಈ ವೇಳೆ ವರ ಸುಮೀತ ಅಷ್ಟೇಕರ್ ಮಾತನಾಡಿ, ಮದುವೆಯ ನಂತರ ಮೊದಲ ಆದ್ಯತೆ ಮತದಾನಕ್ಕೆ ನೀಡಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಒಂದು ಪವಿತ್ರ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಮತದಾನದ ದಿನವೇ ಹೊಸ ಬಾಳಿಗೆ ಅಡಿಯಿಟ್ಟ ದಂಪತಿ ಮತದಾನದ ಕರ್ತವ್ಯ ಪೂರೈಸಿದ್ದು ಬಿಜಗರ್ಣಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಯಿತು.

ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ’ ಬಿಜೆಪಿ ಪಕ್ಷದಿಂದ ಉಚ್ಛಾಟನೆ