ಕೊರೊನಾ ವೈರಸ್ ಕಂಡುಬಂದ್ರೆ ಅದನ್ನು ಫಡ್ನವೀಸ್ ಬಾಯೊಳಗೆ ಹಾಕುತ್ತೇನೆ : ಶಿವಸೇನೆ ಶಾಸಕ - BC Suddi
ಕೊರೊನಾ ವೈರಸ್ ಕಂಡುಬಂದ್ರೆ ಅದನ್ನು ಫಡ್ನವೀಸ್ ಬಾಯೊಳಗೆ ಹಾಕುತ್ತೇನೆ : ಶಿವಸೇನೆ ಶಾಸಕ

ಕೊರೊನಾ ವೈರಸ್ ಕಂಡುಬಂದ್ರೆ ಅದನ್ನು ಫಡ್ನವೀಸ್ ಬಾಯೊಳಗೆ ಹಾಕುತ್ತೇನೆ : ಶಿವಸೇನೆ ಶಾಸಕ

ಮಹಾರಾಷ್ಟ್ರ: “ಕೊರೊನಾ ವೈರಸ್ ಕಂಡುಬಂದಲ್ಲಿ ಅದನ್ನು ದೇವೇಂದ್ರ ಫಡ್ನವೀಸ್ ಬಾಯೊಳಗೆ ಹಾಕುತ್ತೇನೆ” ಎಂದು ಶಿವಸೇನೆಯ ಶಾಸಕ ಸಂಜಯ್ ಗಾಯಕ್ವಾಡ್ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮಹಾರಾಷ್ಟ್ರದಲ್ಲಿ ರೆಮ್ಡಿಸಿವಿರ್ ಚುಚ್ಚುಮದ್ದು ಪೂರೈಕೆ ವಿಷಯದಲ್ಲಿ ಬಿಜೆಪಿ ಹಾಗೂ ಶಿವಸೇನೆ ನಡುವೆ ಜಟಾಪಟಿ ಉಂಟಾಗಿದ್ದು, ಇದರ ಬೆನ್ನಲ್ಲೇ ಗಾಯಕ್ವಾಡ್ ಹೇಳಿಕೆಗೆ ವಿಪಕ್ಷಗಳಿಂದ ಪ್ರತಿಭಟನೆ ವ್ಯಕ್ತವಾಗಿದೆ.

ರೆಮ್‌ಡಿಸಿವಿರ್‌ ಚುಚ್ಚುಮದ್ದಿನ ದಾಸ್ತಾನಿಗೆ ಸಂಬಂಧಿಸಿ ಮುಂಬೈ ಪೊಲೀಸರು, ಫಾರ್ಮಾ ಕಂಪನಿಯೊಂದರ ಹಿರಿಯ ಅಧಿಕಾರಿಯೊಬ್ಬರ ವಿರುದ್ಧ ತನಿಖೆ ನಡೆಸುತ್ತಿರುವುದಕ್ಕೆ ಪ್ರತಿಪಕ್ಷ ನಾಯಕ ದೇವೇಂದ್ರ ಫಡ್ನವೀಸ್ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ನೆರೆಯ ಕೇಂದ್ರಾಡಳಿತ ಪ್ರದೇಶ ದಮನ್‌ನ ರೆಮ್‌ಡಿಸಿವಿರ್ ಪೂರೈಕೆದಾರ ಕಂಪನಿಯೊಂದಕ್ಕೆ ಮಹಾರಾಷ್ಟ್ರ ಸರ್ಕಾರ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದ್ದರು.

ಇದೇ ವಿಚಾರವಾಗಿ ಶಾಸಕ ಸಂಜಯ್ ಗಾಯಕ್ವಾಡ್ ಈ ಬಗ್ಗೆ ಪತ್ರಕರ್ತರೊಂದಿಗೆ ಮಾತನಾಡಿದ್ದು, “ದೇವೇಂದ್ರ ಫಡ್ನವೀಸ್ ಸಂಕ್ರಾಮಿಕ ಕಾಲಘಟ್ಟದಲ್ಲಿ ಸರ್ಕಾರದೊಂದಿಗೆ ನಿಲ್ಲುವ ಬದಲು ವೈಫಲ್ಯಗಳನ್ನು ಎದುರು ನೋಡುತ್ತಿದ್ದಾರೆ. ಅವರು ಮುಖ್ಯಮಂತ್ರಿಯಾಗಿದ್ದರೆ, ಸಾಂಕ್ರಾಮಿಕ ಎದುರಾಗಿರುವ ಇಂತಹ ಪರಿಸ್ಥಿತಿಯಲ್ಲಿ ಏನು ಮಾಡುತ್ತಿದ್ದರು? ಹೀಗಾಗಿ ಕೊರೊನಾ ವೈರಸ್ ನನ್ನ ಕೈಗೇನಾದ್ರೂ ಸಿಕ್ಕಿದ್ರೆ ನಾನು ಅದನ್ನು ಅವರ ಬಾಯೊಳಗೆ ಹಾಕುತ್ತಿದ್ದೆ ಎಂದು ಸಂಜಯ್ ಗಾಯಕ್ವಾಡ್ ಹೇಳಿದ್ದಾರೆ.

ಶಾಸಕ ಸಂಜಯ್ ಗಾಯಕ್ವಾಡ್ ಹೇಳಿಕೆಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ಬಿಜೆಪಿ ಕಾರ್ಯಕರ್ತರು ಅವರ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದಾರೆ

ಕೊರೊನಾ ಸೋಂಕು ಹೆಚ್ಚುತ್ತಿರುವ ಕಾರಣ:  ರಾಜ್ಯಾಪಾಲರ ಅಧ್ಯಕ್ಷತೆಯಲ್ಲಿ ಬಿಎಸ್‌ವೈ ಸೇರಿದಂತೆ ಪ್ರಮುಖರ ವರ್ಚುವಲ್‌‌ ಸಭೆ