ಕೊರೋನಾ ಸೋಂಕು ಜಾಸ್ತಿ: ಏಪ್ರಿಲ್ 11 ರವರಗೆ ಶಾಲೆಗಳು ಬಂದ್..! - BC Suddi
ಕೊರೋನಾ ಸೋಂಕು ಜಾಸ್ತಿ: ಏಪ್ರಿಲ್ 11 ರವರಗೆ ಶಾಲೆಗಳು ಬಂದ್..!

ಕೊರೋನಾ ಸೋಂಕು ಜಾಸ್ತಿ: ಏಪ್ರಿಲ್ 11 ರವರಗೆ ಶಾಲೆಗಳು ಬಂದ್..!

 

ಲಕ್ನೋ: ಸಿಎಂ ಯೋಗಿ ಆದಿತ್ಯನಾಥ್ ಇಂದು ಬೆಳಗ್ಗೆ ಅಧಿಕಾರಿಗಳ ಜೊತೆಗೆ ಪರಿಶೀಲನಾ ಸಭೆ ನಡೆಸಿದ ನಂತರ ಶಾಲೆಗಳನ್ನು ಮುಚ್ಚುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಏಪ್ರಿಲ್ 11ರವರೆಗೆ ಆನ್ ಲೈನ್ ತರಗತಿ ನಡೆಸಲು ಉತ್ತರ ಪ್ರದೇಶದಲ್ಲಿರುವ 200 ಅನುದಾನರಹಿತ ಖಾಸಗಿ ಶಾಲೆಗಳು ನಿರ್ಧಾರ ಮಾಡಿವೆ, ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಸೋಂಕಿನ ಪ್ರಮಾಣ ಅಧಿಕ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಕಾರಣ ಸಣ್ಣ ವಯಸ್ಸಿನ ಮಕ್ಕಳ ಭವಿಷ್ಯದ ಜೊತೆ ಆಟವಾಡಬಾರದು ಎಂದು ನಿರ್ಧರಿಸಿದೆ. ಸದ್ಯ ಉತ್ತರ ಪ್ರದೇಶದಲ್ಲಿ ಕಳೆದ ವರ್ಷ ಕೂಡ ಇದೇ ಸಮಯದಲ್ಲಿ ಕೊರೋನಾ ಸೋಂಕು ಗರಿಷ್ಠ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಇಂದು ಕೂಡ ಅದೇ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಶಿಕ್ಷಕರು ಮತ್ತು ಇತರ ಸಿಬ್ಬಂದಿ ಶಾಲೆಗೆ ಹಾಜರಾಗಲು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.

error: Content is protected !!