ಭಾರತದಲ್ಲಿ ಉಲ್ಬಣವಾಗುತ್ತಿರುವ ಕೊರೊನಾ ಪರಿಸ್ಥಿತಿಯನ್ನು ಕಂಡು ಮನಸ್ಸು ಛಿದ್ರವಾಗಿದೆ: 135 ಕೋಟಿ ರೂ. ನೆರವು ಘೋಷಿಸಿದ ಗೂಗಲ್ ಸಿಇಒ ಸುಂದರ್ ಪಿಚೈ - BC Suddi
ಭಾರತದಲ್ಲಿ ಉಲ್ಬಣವಾಗುತ್ತಿರುವ ಕೊರೊನಾ ಪರಿಸ್ಥಿತಿಯನ್ನು ಕಂಡು ಮನಸ್ಸು ಛಿದ್ರವಾಗಿದೆ: 135 ಕೋಟಿ ರೂ. ನೆರವು ಘೋಷಿಸಿದ ಗೂಗಲ್ ಸಿಇಒ ಸುಂದರ್ ಪಿಚೈ

ಭಾರತದಲ್ಲಿ ಉಲ್ಬಣವಾಗುತ್ತಿರುವ ಕೊರೊನಾ ಪರಿಸ್ಥಿತಿಯನ್ನು ಕಂಡು ಮನಸ್ಸು ಛಿದ್ರವಾಗಿದೆ: 135 ಕೋಟಿ ರೂ. ನೆರವು ಘೋಷಿಸಿದ ಗೂಗಲ್ ಸಿಇಒ ಸುಂದರ್ ಪಿಚೈ

ವಾಷಿಂಗ್ಟನ್: “ಭಾರತದಲ್ಲಿ ಉಲ್ಬಣವಾಗುತ್ತಿರುವ ಕೊರೊನಾ ಪರಿಸ್ಥಿತಿಯನ್ನು ಕಂಡು ಮನಸ್ಸು ಛಿದ್ರವಾಗಿದೆ” ಎಂದು ಗೂಗಲ್ ಸಿಇಒ ಭಾರತ ಮೂಲದ ಸುಂದರ್ ಪಿಚೈ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, “ಭಾರತದಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಈ ಪರಿಸ್ಥಿತಿಯನ್ನು ನೋಡಿ ಮನಸ್ಸು ಛಿದ್ರವಾಗಿದೆ. ಶೀಘ್ರವೇ ಗೂಗಲ್‌‌ ಭಾರತಕ್ಕೆ ವೈದ್ಯಕೀಯ ಸರಬರಾಜು, ಅಪಾಯದಲ್ಲಿರುವ ಸಮುದಾಯಗಳಿಗೆ ಬೆಂಬಲ ನೀಡುವ ಉದ್ದೇಶದಿಂದ ಹಾಗೂ ನಿರ್ಣಾಯಕ ಮಾಹಿತಿಯನ್ನು ನೀಡಲು ನಿಟ್ಟಿನಲ್ಲಿ 135 ಕೋಟಿ ರೂ. ಅನುದಾನವನ್ನು ನೀಡಲಿದೆ” ಎಂದು ತಿಳಿಸಿದ್ದಾರೆ.

ಈ ಮೊದಲು ಟ್ವೀಟ್‌ ಮಾಡಿದ್ದ ಮೈಕ್ರೋಸಾಫ್ಟ್‌‌‌‌ ಮುಖ್ಯಸ್ಥ ಸತ್ಯ ನಾಡೆಲ್ಲ, “ಭಾರತದ ಸದ್ಯದ ಪರಿಸ್ಥಿತಿ ಹೃದಯ ವಿದ್ರಾವಕವಾಗಿದೆ, ಇಂತಹ ಸಂಕಷ್ಟದ ಸಂದರ್ಭ ಭಾರತಕ್ಕೆ ಅಮೇರಿಕಾ ಸರ್ಕಾರ ಸಹಾಯ ಮಾಲು ಮುಂದಾಗಿದೆ. ಇದಕ್ಕೆ ನಾನು ಕೃತಜ್ಞನಾಗಿದ್ದೇನೆ. ಭಾರತದ ಪರಿಸ್ಥಿತಿಗೆ ನೆರವಾಗುವ ನಿಟ್ಟಿನಲ್ಲಿ ಮೈಕ್ರೋಸಾಫ್ಟ್‌ ಸಂಸ್ಥೆ ತನ್ನ ಧ್ವನಿ, ಸಂಪನ್ಮೂಲಗಳು ಹಾಗೂ ತಂತ್ರಜ್ಞಾನವನ್ನು ಹಾಗೂ ವೆಂಟಿಲೇಟರ್‌‌ ಸಾಧನಗಳ ಖರೀದಿಗೆ ಬೆಂಬಲಿಸುತ್ತದೆ” ಎಂದಿದ್ದರು.

ದುಬೈ:  ಬುರ್ಜ್‌ ಖಲೀಫಾದಲ್ಲಿ ತ್ರಿವರ್ಣ ಧ್ವಜ ಬೆಳಗಿಸಿ ಭಾರತಕ್ಕೆ ಬೆಂಬಲಿಸಿದ ಯುಎಇ