ಸಚಿನ್ ಬೆನ್ನಲ್ಲೇ ಯೂಸುಫ್ ಪಠಾಣ್‌ಗೂ ಕೊರೊನಾ ದೃಢ - BC Suddi
ಸಚಿನ್ ಬೆನ್ನಲ್ಲೇ ಯೂಸುಫ್ ಪಠಾಣ್‌ಗೂ ಕೊರೊನಾ ದೃಢ

ಸಚಿನ್ ಬೆನ್ನಲ್ಲೇ ಯೂಸುಫ್ ಪಠಾಣ್‌ಗೂ ಕೊರೊನಾ ದೃಢ

ನವದೆಹಲಿ: ಟೀಂ ಇಂಡಿಯಾದ ಮಾಜಿ ಆಲ್‌ರೌಂಡರ್ ಯೂಸುಫ್ ಪಠಾಣ್ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಈ ವಿಚಾರವನ್ನು ಸ್ವತಃ ಯೂಸುಫ್ ಪಠಾಣ್ ಅವರು ತಿಳಿಸಿದ್ದಾರೆ. ಇದೇ ದಿನ ಬೆಳಗ್ಗೆ ಕ್ರಿಕೆಟ್‌ ದಂತಕತೆ ಸಚಿನ್ ತೆಂಡೂಲ್ಕರ್ ಅವರು ಕೂಡ ತಮಗೆ ಕೋವಿಡ್-19 ಸೋಂಕು ದೃಢಪಟ್ಟಿರುವ ವಿಚಾರವನ್ನು ತಿಳಿಸಿದ್ದರು. ಈ ಇಬ್ಬರು ಕ್ರಿಕೆಟರ್‌ಗಳಿಗೆ ಸೋಂಕು ದೃಢಪಟ್ಟಿರುವುದು ಉಳಿದ ಆಟಗಾರರ ಆತಂಕಕ್ಕೆ ಕಾರಣವಾಗಿದೆ.

ಟ್ವೀಟ್‌ ಮಾಡಿರುವ ಯೂಸುಫ್ ಪಠಾಣ್, ‘ನನಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ. ರೋಗದ ಸಣ್ಣ ಗುಣಲಕ್ಷಣಗಳಿವೆ. ನಾನೀಗ ಮನೆಯಲ್ಲಿ ಕ್ವಾರಂಟೈನ್ ಪಾಲಿಸುತ್ತಿದ್ದೇನೆ. ಸೂಚಿಸಲಾದ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ನಾನು ಪಾಲಿಸುತ್ತಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ‘ರೋಡ್ ಸೇಫ್ಟಿ ವರ್ಲ್ಡ್‌ ಸೀರೀಸ್’ ಟಿ20 ಸರಣಿಯಲ್ಲಿ ಸಚಿನ್ ತೆಂಡೂಲ್ಕರ್, ಯೂಸೂಫ್ ಪಠಾಣ್ ಇಬ್ಬರೂ ಪಾಲ್ಗೊಂಡಿದ್ದರು. ಈ ಟೂರ್ನಿಯಲ್ಲಿ ಇಂಡಿಯಾ ಲೆಜೆಂಡ್ಸ್ ಚಾಂಪಿಯನ್ಸ್ ಆಗಿ ಹೊರಹೊಮ್ಮಿತ್ತು. ಫೈನಲ್‌ನಲ್ಲಿ ಇಂಡಿಯಾ ಲೆಜೆಂಡ್ಸ್‌ ಮತ್ತು ಶ್ರೀಲಂಕಾ ಲೆಜೆಂಡ್ಸ್‌ ಮಧ್ಯೆ ಕಾದಾಟ ನಡೆದಿತ್ತು.

ಡಿಕೆಶಿಗೆ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮುತ್ತಿಗೆ ಹಾಕಲು ಯತ್ನ – ಬಿಗಿ ಪೊಲೀಸ್ ಭದ್ರತೆ

error: Content is protected !!