ಕೇಂದ್ರ ಸಚಿವ ಸಂತೋಷ್‍ ಗಂಗ್ವಾರ್‌ಗೆ ಕೊರೊನಾ ಪಾಸಿಟಿವ್‌ - BC Suddi
ಕೇಂದ್ರ ಸಚಿವ ಸಂತೋಷ್‍ ಗಂಗ್ವಾರ್‌ಗೆ ಕೊರೊನಾ ಪಾಸಿಟಿವ್‌

ಕೇಂದ್ರ ಸಚಿವ ಸಂತೋಷ್‍ ಗಂಗ್ವಾರ್‌ಗೆ ಕೊರೊನಾ ಪಾಸಿಟಿವ್‌

ನವದೆಹಲಿ: ಕೇಂದ್ರ ಸಚಿವ ಸಂತೋಷ್‍ ಗಂಗ್ವಾರ್‌ ಅವರಿಗೆ ಮಂಗಳವಾರ ಕೊರೊನಾ ಸೋಂಕು ದೃಢಪಟ್ಟಿದೆ.

ಈ ಬಗ್ಗೆ ಸ್ವತಃ ಅವರೇ ಟ್ವೀಟ್‌ ಮೂಲಕ ತಿಳಿಸಿದ್ದಾರೆ. ಕೊರೊನಾ ವರದಿ ಪಾಸಿಟಿವ್‌ ಆಗಿದೆ ಎಂದು ಅವರು ಹೇಳಿದ್ದಾರೆ.

”ನನ್ನ ಕೊರೊನಾ ಪರೀಕ್ಷಾ ವರದಿ ಪಾಸಿಟಿವ್‌ ಆಗಿದೆ ಎಂದು ನಿಮಗೆ ತಿಳಿಸಲು ನಾನು ಬಯಸುತ್ತೇನೆ. ನನಗೆ ಯಾವುದೇ ರೀತಿಯ ಸಮಸ್ಯೆ ಇಲ್ಲ, ನನ್ನೊಂದಿಗೆ ಸಂಪರ್ಕಕ್ಕೆ ಬಂದಿರುವ ಪ್ರತಿಯೊಬ್ಬರೂ, ದಯವಿಟ್ಟು ಕೊರೊನಾ ಸುರಕ್ಷತಾ ನಿಯಮಗಳನ್ನು ಅನುಸರಿಸಿ ಎಂದು ವಿನಂತಿಸುತ್ತೇನೆ. ಒಂದಾಗಿ ಕೊರೊನಾ ಸಾಂಕ್ರಾಮಿಕದ ವಿರುದ್ದ ಹೋರಾಡೋಣ” ಎಂದು ಟ್ವೀಟ್‌ ಮೂಲಕ ಹೇಳಿದ್ದಾರೆ.

24 ಗಂಟೆ ಕಾಲ ಪ್ರಚಾರ ನಿಷೇಧ – ಗಾಂಧಿ ಪ್ರತಿಮೆ ಎದುರು ದೀದಿ ಧರಣಿ