ದೆಹಲಿ : ಕೊರೊನಾ ಕರುಣಾಜನಕ ಸ್ಥಿತಿ : ಆಸ್ಪತ್ರೆ ಹೊರಗೆ ಹೆಣಗಳ ರಾಶಿ, ಒಂದೇ ಬೆಡ್ ನಲ್ಲಿ ಇಬ್ಬರಿಗೆ ಚಿಕಿತ್ಸೆ! - BC Suddi
ದೆಹಲಿ : ಕೊರೊನಾ ಕರುಣಾಜನಕ ಸ್ಥಿತಿ : ಆಸ್ಪತ್ರೆ ಹೊರಗೆ ಹೆಣಗಳ ರಾಶಿ, ಒಂದೇ ಬೆಡ್ ನಲ್ಲಿ ಇಬ್ಬರಿಗೆ ಚಿಕಿತ್ಸೆ!

ದೆಹಲಿ : ಕೊರೊನಾ ಕರುಣಾಜನಕ ಸ್ಥಿತಿ : ಆಸ್ಪತ್ರೆ ಹೊರಗೆ ಹೆಣಗಳ ರಾಶಿ, ಒಂದೇ ಬೆಡ್ ನಲ್ಲಿ ಇಬ್ಬರಿಗೆ ಚಿಕಿತ್ಸೆ!

ದೆಹಲಿ : ಡೆಡ್ಲಿ ಸೋಂಕಿನ ಎರಡನೇ ಅಲೆ ಅಬ್ಬರ ಜೋರಾಗಿದೆ. ಮತ್ತೆ ಹಲವರ ಉಸಿರು ನಿಲ್ಲಿಸುತ್ತಿರುವ ಕೊರೊನಾ ಕಂಟ್ರೋಲ್ ಗೆ ಸಿಗುತ್ತಿಲ್ಲ. ಹಾಸಿಗೆಗಳ ಕೊರತೆ, ಆಮ್ಲಜನಕದ ಕೊರತೆ.. ಒಂದೇ ಹಾಸಿಗೆಯಲ್ಲಿ ಆಕ್ಸಿಜನ್ ಮಾಸ್ಕ್ ಹಾಕಿಕೊಂಡು ಮಲಗಿರುವ ಇಬ್ಬರು ಕೊರೊನಾ ಸೋಂಕಿತರು ಇಂತಹ ಭಯಾನಕ ದೃಶ್ಯ ಕಂಡು ಬಂದದ್ದು ದೆಹಲಿಯ ಲೋಕ ನಾಯಕ ಜಯಪ್ರಕಾಶ್ ನಾರಾಯಣ ಆಸ್ಪತ್ರೆಯಲ್ಲಿ.

ಕೊವಿಡ್ ಸೋಂಕಿತರಿಗಾಗಿಯೇ ಸುಮಾರು 1500 ಹಾಸಿಗೆ ವ್ಯವಸ್ಥೆಯಿರುವ ದೆಹಲಿಯ ಸರ್ಕಾರಿ ಆಸ್ಪತ್ರೆ ಇದೀಗ ಸೋಂಕಿತರಿಂದ ತುಂಬಿ ತುಳುಕುತ್ತಿದೆ. ‘ನನಗೆ ಗೊತ್ತು, ನಮ್ಮ ಆಸ್ಪತ್ರೆಯಲ್ಲಿ ಮಿತಿಮೀರಿದ, ಹಿಡಿಯಲಾರದಷ್ಟು ಕೊರೊನಾ ಸೋಂಕಿತರು ತುಂಬಲಿದ್ದಾರೆ. ಈಗಲೇ ಹಾಸಿಗೆಯೂ ಸೇರಿ ನಮ್ಮಲ್ಲಿರುವ ಎಲ್ಲಾ ವ್ಯವಸ್ಥೆಗಳ ಸಾಮರ್ಥ್ಯ ಭರ್ತಿಯಾಗಿದೆ’ ಎಂದು ಲೋಕ ನಾಯಕ ಜಯಪ್ರಕಾಶ್ ನಾರಾಯಣ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಸುರೇಶ್ ಕುಮಾರ್ ಹೇಳುತ್ತಾರೆ. ಈ ಕುರಿತು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಡ್ ಗಳ ಕೊರತೆ ಸಾಮಾನ್ಯವಾಗಿದೆ ಹೀಗಾಗಿ ಕೊವಿಡ್ ಇಲ್ಲದ ಕೊವಿಡ್ ಸೋಂಕಿತರ ಜತೆ ಬೆಡ್ ಹಂಚಿಕೊಳ್ಳಬೇಕಾದ ಸ್ಥಿತಿ ಎದುರಾಗಿದೆ. ಇನ್ನು ಮೃತಪಟ್ಟ ರೋಗಿಗಳ ಸಂಬಂದಿಕರು ಶವ ಪಡೆಯಲು ಸುಡು ಬಿಸಿಲಿನಲ್ಲಿ ಕಾಯುತ್ತಿರುವ ದೃಶ್ಯ ಎಂಥವರ ಕರುಳನ್ನೂ ಹಿಂಡುತ್ತದೆ.

ದೆಹಲಿಯಲ್ಲಿ ಇಂದು 16,699 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಇಂದು ಒಂದೇ ದಿನ ಕೊರೊನಾದಿಂದ 112 ಮಂದಿ ಸಾವನ್ನಪ್ಪಿದ್ದಾರೆ. ಕೊರೊನಾ ಪರೀಕ್ಷೆಯ ಪಾಸಿಟಿವ್ ರೇಟ್ ಶೇ 20.22ರಷ್ಟಿದ್ದು ದೇಶದ ರಾಜಧಾನಿ ಒಂದರಲ್ಲೇ 54,309 ಸಕ್ರಿಯ ಪ್ರಕರಣಗಳಿವೆ.

ಧಾರ್ಮಿಕ ಕೇಂದ್ರ ,ಶಾಲಾ – ಕಾಲೇಜು ಬಂದ್ – ರಾಜ್ಯಾದ್ಯಂತ 144 ಸೆಕ್ಷನ್ ಜಾರಿಗೆ ತಜ್ಞರ ಶಿಫಾರಸ್ಸು