ರಾಜ್ಯದಲ್ಲಿ ಕೊರೊನಾ ಸೋಂಕು ಏರಿಕೆ: ಎಲ್ಲ ಚುನಾವಣೆಗಳನ್ನು 6 ತಿಂಗಳು ಮುಂದೂಡಲು ರಾಜ್ಯ ಸರ್ಕಾರ ಶಿಫಾರಸ್ಸು - BC Suddi
ರಾಜ್ಯದಲ್ಲಿ ಕೊರೊನಾ ಸೋಂಕು ಏರಿಕೆ: ಎಲ್ಲ ಚುನಾವಣೆಗಳನ್ನು 6 ತಿಂಗಳು ಮುಂದೂಡಲು ರಾಜ್ಯ ಸರ್ಕಾರ ಶಿಫಾರಸ್ಸು

ರಾಜ್ಯದಲ್ಲಿ ಕೊರೊನಾ ಸೋಂಕು ಏರಿಕೆ: ಎಲ್ಲ ಚುನಾವಣೆಗಳನ್ನು 6 ತಿಂಗಳು ಮುಂದೂಡಲು ರಾಜ್ಯ ಸರ್ಕಾರ ಶಿಫಾರಸ್ಸು

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಈ ಹಿನ್ನೆಲೆ ಬಿಬಿಎಂಪಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ಕೆಲ ಪುರಸಭೆ, ನಗರಸಭೆ ಚುನಾವಣೆಗಳು ಆರು ತಿಂಗಳುಗಳ ಕಾಲ ಮುಂದೂಡಿಕೆ ಮಾಡಲು ಚುನಾವಣಾ ಆಯೋಗಕ್ಕೆ ಶಿಫಾರಸ್ಸು ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ ಅವರು, ನಾಳೆ ಸಂಜೆಯಿಂದ ರಾಜ್ಯಾದ್ಯಾಂತ 14 ದಿನಗಳ ಕಾಲ ಭಾಗಶಃ ಲಾಕ್ ಡೌನ್ ಹಾಗೂ 18 ರಿಂದ 45 ವಯಸ್ಸಿನವರಿಗೆ ಉಚಿತ ಕೊರೊನಾ ಲಸಿಕೆ ಬಗ್ಗೆ ತಿಳಿಸಿದ್ದಾರೆ.

ಹಾಗೆಯೇ ಈ ಸಂದರ್ಭದಲ್ಲೇ ಇಂದಿನ ಸಭೆಯಲ್ಲಿ ಆರು ತಿಂಗಳುಗಳ ಕಾಲ ಎಲ್ಲ ಚುನಾವಣೆಯನ್ನು ಮುಂದೂಡಿಕೆಗೆ ಚುನಾವಣಾ ಆಯೋಗಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಕೂಡಾ ಮುಖ್ಯಮಂತ್ರಿ ತಿಳಿಸಿದ್ದಾರೆ.

ಮೇ ತಿಂಗಳ ಅಂತ್ಯದಲ್ಲಿ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಅಧಿಕಾರವಧಿ ಮುಗಿಯಲಿದ್ದು ಇದಕ್ಕೂ ಮುನ್ನ ಚುನಾವಣೆಗೆ ತಯಾರಿ ನಡೆಸಲಾಗಿತ್ತು. ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಮೇ 9ರಂದು ನಡೆಸಲು ಎಲ್ಲಾ ಸಿದ್ದತೆ ನಡೆಸಲಾಗಿತ್ತು. ಆದರೆ ಈಗ ಚುನಾವಣೆ ಮುಂದೂಡಲು ಚುನಾವಣಾ ಆಯೋಗಕ್ಕೆ ಶಿಫಾರಸ್ಸು ಮಾಡಲು ಸರ್ಕಾರ ನಿರ್ಧರಿಸಿದೆ.

ಇನ್ನು ಮುಖ್ಯಮಂತ್ರಿಗಳು ಮಾಧ್ಯಮದೊಂದಿಗೆ ಮಾತನಾಡಿದ ಸಂದರ್ಭ ಎಲ್ಲಿಯೂ ಲಾಕ್‌ಡೌನ್‌ ಶಬ್ದ ಉಲ್ಲೇಖ ಮಾಡದೆ, ಬಿಗಿ ಕ್ರಮ ಎಂದಷ್ಟೇ ಹೇಳಿದ್ದಾರೆ.

ಏತನ್ಮಧ್ಯೆ ಕೊರೊನಾ ಮಾರ್ಗಸೂಚಿ ಪರಿಶೀಲನೆಗೆ ಸಮಿತಿ ರಚನೆ ಮಾಡಲಾಗುವುದು ಎಂದು ಗೃಹ ಸಚಿವ ಬಸವರಾಜು ಬೊಮ್ಮಾಯಿ ಹೇಳಿದ್ದಾರೆ.

ಕೊರೊನಾ ಕರ್ಫ್ಯೂ: ಸಮಗ್ರ ಪರಿಶೀಲನೆ ಬಳಿಕ ಕೊರೊನಾ ಕರ್ಫ್ಯೂ ಮಾರ್ಗಸೂಚಿ ಪ್ರಕಟ: ಬಸವರಾಜ ಬೊಮ್ಮಾಯಿ