ಕೊರೊನಾ ಹೆಚ್ಚಳ: ಸುಪ್ರೀಂ ಕೋರ್ಟ್‌ನಲ್ಲಿ ನಾಳೆಯಿಂದ ತುರ್ತು ವಿಚಾರಗಳನ್ನು ಮಾತ್ರ..! - BC Suddi
ಕೊರೊನಾ ಹೆಚ್ಚಳ: ಸುಪ್ರೀಂ ಕೋರ್ಟ್‌ನಲ್ಲಿ ನಾಳೆಯಿಂದ ತುರ್ತು ವಿಚಾರಗಳನ್ನು ಮಾತ್ರ..!

ಕೊರೊನಾ ಹೆಚ್ಚಳ: ಸುಪ್ರೀಂ ಕೋರ್ಟ್‌ನಲ್ಲಿ ನಾಳೆಯಿಂದ ತುರ್ತು ವಿಚಾರಗಳನ್ನು ಮಾತ್ರ..!

ನವದೆಹಲಿ: “ದೇಶದಲ್ಲಿ ದಿನೇ ದಿನೇ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಈ ನಡುವೆ ಸುಪ್ರೀಂ ಕೋರ್ಟ್‌ನಲ್ಲಿ ನಾಳೆಯಿಂದ ತುರ್ತು ವಿಚಾರಗಳನ್ನು ಮಾತ್ರವೇ ನಡೆಸಲಾಗುವುದು” ಎಂದು ಸುಪ್ರೀಂ ಕೋರ್ಟ್ ಸುತ್ತೋಲೆಯಲ್ಲಿ ಹೇಳಿದೆ.

“ಕಳೆದ ವರ್ಷ ಜುಲೈ 4ರಂದು ಸರ್ಕಾರ ಹೊರಡಿಸಿದ್ದ ಕೊರೊನಾ ನಿಯಮಾವಳಿಗಳನ್ನು ಅನುಸರಿಸಿಕೊಂಡು ಹಾಗೂ ಅದಕ್ಕೂ ಮುನ್ನ ಹೊರಡಿಸಿದ್ದ ಸುತ್ತೋಲೆಯ ಪ್ರಕಾರ ಎಪ್ರಿಲ್‌ 22ರಿಂದ ತುರ್ತು ವಿಚಾರಣೆಗಳನ್ನು ಮಾತ್ರವೇ ನಡೆಸಲಾಗುವುದು” ಎಂದು ತಿಳಿಸಿದೆ.

“ದೇಶದಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ತೀವ್ರ ತುರ್ತು ಸಂದರ್ಭದಲ್ಲಿ ಬಾಕಿ ಇರುವ ವಿಚಾರಗಳಲ್ಲಿ ವಿನಂತಿಯನ್ನು ಈಗಾಗಲೇ ಸೂಚಿಸಲಾದ ಗೊತ್ತುಪಡಿಸಲಾದ ಲಿಂಕ್‌‌ನಲ್ಲಿ ಮಾಡಬಹುದು” ಎಂದು ಹೇಳಿದೆ. ಕಳೆದ 24 ಗಂಟೆಗಳಲ್ಲಿ ನವದೆಹಲಿಯಲ್ಲಿ 25 ಸಾವಿರದ 500 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ.

ಅಪ್ರಾಪ್ತ ಬಾಲಕಿಯ ಅತ್ಯಾಚಾರ : ಟಿಕ್‌ಟಾಕ್ ತಾರೆ ’ಫನ್‌ ಬಕೆಟ್ ಭಾರ್ಗವ್ ’ ಬಂಧನ