ಅರ್ಜುನ್​ ಜನ್ಯಗೆ ಕೊರೊನಾ ದೃಢ, ಆಸ್ಪತ್ರೆಗೆ ದಾಖಲು - BC Suddi
ಅರ್ಜುನ್​ ಜನ್ಯಗೆ ಕೊರೊನಾ ದೃಢ, ಆಸ್ಪತ್ರೆಗೆ ದಾಖಲು

ಅರ್ಜುನ್​ ಜನ್ಯಗೆ ಕೊರೊನಾ ದೃಢ, ಆಸ್ಪತ್ರೆಗೆ ದಾಖಲು

ಬೆಂಗಳೂರು: ಸ್ಯಾಂಡಲ್‌ವುಡ್‌ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್​ ಜನ್ಯ ಅವರಿಗೆ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅರ್ಜುನ್ ಜನ್ಯ ಅವರು, “ಎಲ್ಲ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದರೂ ಕೂಡ ನನಗೆ ಹೇಗೆ ಕೊರೊನಾ ವೈರಸ್​ ತಗುಲಿತು ಎಂಬುದು ತಿಳಿದಿಲ್ಲ. ಶೀಘ್ರವೇ ಚೇತರಿಸಿಕೊಳ್ಳುತ್ತೇನೆ ಎಂಬ ಭರವಸೆ ಇದೆ. ನೆಗೆಟಿವ್​ ವರದಿ ಬಂದ ಬಳಿಕ ವೈದ್ಯರ ಸಲಹೆ ಪಡೆದುಕೊಂಡು ಕೆಲಸ ಆರಂಭಿಸುತ್ತೇನೆ” ಎಂದು ತಿಳಿಸಿದ್ದಾರೆ.

ಅರ್ಜುನ್​ ಜನ್ಯ ಅವರಿಗೆ ಕಳೆದ ವರ್ಷ ಹೃದಯಾಘಾತ ಆಗಿದ್ದು ಅಭಿಮಾನಿಗಳಿಗೆ ಶಾಕ್ ನೀಡಿದಂತಾಗಿತ್ತು. ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಅವರು ಚೇತರಿಸಿಕೊಂಡಿದ್ದರು.

error: Content is protected !!