ಕಾಂಗ್ರೆಸ್ ಪ್ರತಿಭಟನೆಯ ಮಧ್ಯೆ ಎರಡು ವಿಧೇಯಕ ಅಂಗೀಕಾರ! - BC Suddi
ಕಾಂಗ್ರೆಸ್ ಪ್ರತಿಭಟನೆಯ ಮಧ್ಯೆ ಎರಡು ವಿಧೇಯಕ ಅಂಗೀಕಾರ!

ಕಾಂಗ್ರೆಸ್ ಪ್ರತಿಭಟನೆಯ ಮಧ್ಯೆ ಎರಡು ವಿಧೇಯಕ ಅಂಗೀಕಾರ!

ಬೆಂಗಳೂರು : ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕರ ಧರಣಿಯ ಮಧ್ಯೆಯೂ ಎರಡು ವಿಧೇಯಕಗಳನ್ನು ಅಂಗೀಕಾರಗೊಳಿಸಲಾಗಿದೆ.

ಸಾಮಾನ್ಯ ಸೊಸೈಟಿಗಳು ಮತ್ತು ಅಲ್ಪಸಂಖ್ಯಾತ ಸೊಸೈಟಿಗಳ ನಡುವಿನ ತಾರತಮ್ಯವನ್ನು ತೊಡೆದು ಹಾಕುವ ಉದ್ದೇಶದಿಂದ ಕರ್ನಾಟಕ ಸೊಸೈಟಿಗಳ ನೋಂದಣಿ (ತಿದ್ದುಪಡಿ) ವಿಧೇಯಕ 2021 ಮತ್ತು ಕರ್ನಾಟಕ ಜಲಸಾರಿಗೆ ಮಂಡಳಿ(ತಿದ್ದಪಡಿ)2021 ವಿಧೇಯಕಗಳನ್ನು ಅಂಗೀಕಾರಗೊಳಿಸಲಾಯಿತು. ಕಾಂಗ್ರೆಸ್ ಶಾಸಕರ ಧರಣಿಯ ಮಧ್ಯೆಯೇ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ್ ಬೊಮ್ಮಾಯಿ ಅವರು ಪ್ರಸಕ್ತ ಸಾಲಿನ ಪೂರಕ ಅಂದಾಜುಗಳನ್ನು ಮಂಡಿಸಿದರು.

ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರು ಮಂಡಿಸಿದ್ದ ಪ್ರಸಕ್ತ ಸಾಲಿನ ಕರ್ನಾಟಕ ಸೊಸೈಟಿಗಳ ನೋಂದಣಿ(ತಿದ್ದುಪಡಿ) ವಿಧೇಯಕ ಹಾಗೂ ಮೀನುಗಾರಿಕೆ, ಬಂದರು ಸಚಿವ ಎಸ್.ಅಂಗಾರ ಮಂಡಿಸಿದ 2021ನೆ ಸಾಲಿನ ಕರ್ನಾಟಕ ಜಲ ಸಾರಿಗೆ ಮಂಡಳಿ(ತಿದ್ದುಪಡಿ) ವಿಧೇಯಕಕ್ಕೆ ಯಾವುದೆ ಚರ್ಚೆಯಿಲ್ಲದೆ ವಿಧಾನಸಭೆಯಲ್ಲಿ ಅಂಗೀಕಾರ ಪಡೆದವು.

ಪ್ರಚೋದಾನಕಾರಿ ಹೇಳಿಕೆ ನೀಡದ ಟಿಕಾಯತ್ ವಿರುದ್ಧ ಶಿವಮೊಗ್ಗದಲ್ಲಿ ಪ್ರಕರಣ ದಾಖಲು

error: Content is protected !!