ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಳಗಾವಿ ನಗರಕ್ಕೆ ಬಂದ್ರೆ ಬಿಜೆಪಿ ಗೆಲ್ಲುತ್ತೆ: ಕೇಂದ್ರ ಸಚಿವ ಜೋಶಿ - BC Suddi
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಳಗಾವಿ ನಗರಕ್ಕೆ ಬಂದ್ರೆ ಬಿಜೆಪಿ ಗೆಲ್ಲುತ್ತೆ: ಕೇಂದ್ರ ಸಚಿವ ಜೋಶಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಳಗಾವಿ ನಗರಕ್ಕೆ ಬಂದ್ರೆ ಬಿಜೆಪಿ ಗೆಲ್ಲುತ್ತೆ: ಕೇಂದ್ರ ಸಚಿವ ಜೋಶಿ

ಬೆಳಗಾವಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಳಗಾವಿ ನಗರಕ್ಕೆ ಕಾಲಿಟ್ಟರೆ ಸಾಕು ನಮ್ಮ ಅಭ್ಯರ್ಥಿ ಮಂಗಳಾ ಅಂಗಡಿ ಅವರು ಸುಮಾರು ಐದಾರು ಲಕ್ಷ ಮತಗಳ ಅಂತರದಲ್ಲಿ ಗೆದ್ದು ಬರ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಹಳ್ಳಿ ಗ್ರಾಮದಲ್ಲಿ ನಡೆದ ಉಪ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಇನ್ನೂ ಇಪ್ಪತ್ತು ವರ್ಷಗಳ ಕಾಲ ಈ ದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿರುತ್ತೆ. ದೇಶದ ರಕ್ಷಣೆ, ಸಮಗ್ರತೆ ಪ್ರಶ್ನೆ ಬಂದಾಗ ಕಾಂಗ್ರೆಸ್ ಪಕ್ಷವು ವಿದೇಶಗಳೊಂದಿಗೆ ರಾಜಿ ಮಾಡಿಕೊಂಡ ಅನೇಕ ಉದಾಹರಣೆಗಳಿವೆ. ಕಾಂಗ್ರೆಸ್ ಪಕ್ಷವು ಚೀನಾದಿಂದ ಹಣ ಪಡೆದುಕೊಂಡು ಉಚಿತ ವ್ಯಾಪಾರದ ಒಪ್ಪಂದವನ್ನು ಮಾಡಿಕೊಂಡು, ಭಾರತದ ವ್ಯಾಪಾರ-ವಹಿವಾಟುಗಳಿಗೆ ನಷ್ಟ ಮಾಡಿದೆ.ದೇಶದ ಹಿತಾಸಕ್ತಿ ವಿರುದ್ಧವಾದ ಪಕ್ಷ ಯಾವುದಾದರೂ ಇದ್ದರೆ ಅದು ಕಾಂಗ್ರೆಸ್ ಮಾತ್ರ ಎಂದು ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದರು.

ಖಾಸಗಿ ಬಸ್ ಮಾಲೀಕರಿಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ

error: Content is protected !!