ಕಾಂಗ್ರೆಸ್ ಖಾಲಿ ಡಬ್ಬಾ ಆಗಿರುವುದರಿಂದ ಹೆಚ್ಚು ಶಬ್ದ ಮಾಡುತ್ತಿದೆ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ ರವಿ - BC Suddi
ಕಾಂಗ್ರೆಸ್ ಖಾಲಿ ಡಬ್ಬಾ ಆಗಿರುವುದರಿಂದ ಹೆಚ್ಚು ಶಬ್ದ ಮಾಡುತ್ತಿದೆ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ ರವಿ

ಕಾಂಗ್ರೆಸ್ ಖಾಲಿ ಡಬ್ಬಾ ಆಗಿರುವುದರಿಂದ ಹೆಚ್ಚು ಶಬ್ದ ಮಾಡುತ್ತಿದೆ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ ರವಿ

ಕಲಬುರಗಿ: “ಕಾಂಗ್ರೆಸ್ ಖಾಲಿ ಡಬ್ಬಾ ಆಗಿರುವುದರಿಂದ ಹೆಚ್ಚು ಶಬ್ದ ಮಾಡುತ್ತಿದೆ” ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ ರವಿ ಹೇಳಿದ್ದಾರೆ.

ಈ ಕುರಿತು ಬಸವಕಲ್ಯಾಣ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲು ನಗರಕ್ಕಾಗಮಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನೀತಿ ರಾಜಕಾರಣಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧವಿಲ್ಲ, ಕೇರಳದಲ್ಲಿ ಮುಸ್ಲಿಂ ಲೀಗ್ ಜತೆ ಕಾಂಗ್ರೆಸ್ ಪಕ್ಷ ಹೊಂದಾಣಿಕೆ ಮಾಡಿಕೊಂಡಿದ್ದು, ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ ತಮ್ಮದೇ ನೀತಿ ರಾಜಕಾರಣ ಎನ್ನುತ್ತಾರೆ” ಎಂದರು.

ಇನ್ನು ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ನೀಡುತ್ತಿರುವ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿ.ಟಿ ರವಿ, “ಅವರ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಬೇಕೆಂದಿಲ್ಲ. ಏನಿದ್ದರೂ ಕೋರ್ ಕಮಿಟಿ ಸಭೆಯಲ್ಲೇ ಚರ್ಚಿಸಲಾಗುವುದು” ಎಂದಿದ್ದಾರೆ.

ಎರಡು ಗಂಟೆಗಳಲ್ಲಿ 36 ಪುಸ್ತಕಗಳನ್ನು ಓದಿ ಗಿನ್ನೆಸ್‌ ರೆಕಾರ್ಡ್‌ಲ್ಲಿ ಹೆಸರು ಗಿಟ್ಟಿಸಿಕೊಂಡ 5ರ ಬಾಲಕಿ