'ಅತ್ಯಾಚಾರ ಆರೋಪಿಗೆ ಸರ್ಕಾರವೇ ಸಹಕರಿಸುತ್ತಿದೆ'- ಕಾಂಗ್ರೆಸ್‌ - BC Suddi
‘ಅತ್ಯಾಚಾರ ಆರೋಪಿಗೆ ಸರ್ಕಾರವೇ ಸಹಕರಿಸುತ್ತಿದೆ’- ಕಾಂಗ್ರೆಸ್‌

‘ಅತ್ಯಾಚಾರ ಆರೋಪಿಗೆ ಸರ್ಕಾರವೇ ಸಹಕರಿಸುತ್ತಿದೆ’- ಕಾಂಗ್ರೆಸ್‌

ಬೆಂಗಳೂರು: ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವ ಸಿಡಿ ಪ್ರಕರಣ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ಟ್ವೀಟ್‌ ಕದನ ಮುಂದುವರೆದಿದ್ದು, “ಆರೋಪಿಯೋರ್ವನನ್ನು ತಲೆ ತಪ್ಪಿಸಿಕೊಳ್ಳಲು ಸಹಕರಿಸುವುದೂ ಕೂಡಾ ಕಾನೂನಿನ ಪ್ರಕಾರ ಅಪರಾಧ” ಎಂದು ಕಾಂಗ್ರೆಸ್‌‌ ಕೆಂಡಕಾರಿದೆ.

ಅಸ್ಸಾಂ : ಬಿಜೆಪಿ ಅಭ್ಯರ್ಥಿ ಕಾರಲ್ಲಿ ಇವಿಎಂ ಪತ್ತೆ ಪ್ರಕರಣ – ನಾಲ್ವರನ್ನು ಅಮಾನತುಗೊಳಿಸಿದ ಆಯೋಗ

ಈ ಬಗ್ಗೆ ಟ್ವೀಟ್‌ ಮಾಡಿರುವ ಕಾಂಗ್ರೆಸ್,‌ “ಆರೋಪಿಯೊಬ್ಬನನ್ನು ತಲೆ ತಪ್ಪಿಸಿಕೊಳ್ಳಲು ಸಹಕರಿಸುವುದೂ ಕೂಡ ಕಾನೂನಿನ ಪ್ರಕಾರ ಅಪರಾಧ. ಸದ್ಯ ಅತ್ಯಾಚಾರ ಆರೋಪಿ ರಮೇಶ್ ಜಾರಕಿಹೊಳಿ ತಲೆಮರೆಸಿಕೊಂಡು ಅಜ್ಞಾತವಾಸದಲ್ಲಿದ್ದಾರೆ. ಅವರಿಗೆ ಈ ಸರ್ಕಾರವೇ ಸಹಕರಿಸುತ್ತಿದೆ. ಕಾನೂನು ಉಲ್ಲಂಘಿಸಿದ ಸರ್ಕಾರಕ್ಕೇನು ಶಿಕ್ಷೆ!?” ಎಂದು ಪ್ರಶ್ನಿಸಿದೆ.

error: Content is protected !!