ಸೆಕ್ಸ್ ಸಿಡಿ ಪ್ರಕರಣ: ಕುಮಾರಸ್ವಾಮಿ ವಿರುದ್ಧ ಎಸಿಬಿಗೆ ದೂರು - BC Suddi
ಸೆಕ್ಸ್ ಸಿಡಿ ಪ್ರಕರಣ: ಕುಮಾರಸ್ವಾಮಿ ವಿರುದ್ಧ ಎಸಿಬಿಗೆ ದೂರು

ಸೆಕ್ಸ್ ಸಿಡಿ ಪ್ರಕರಣ: ಕುಮಾರಸ್ವಾಮಿ ವಿರುದ್ಧ ಎಸಿಬಿಗೆ ದೂರು

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಇದರ ಮಧ್ಯೆ ಈ ಕೇಸ್ ಗೆ ಸಂಬಂಧಿಸಿದಂತೆ ಸಾಕಷ್ಟು ಮಾಧ್ಯಮ ಪ್ರತಿಕ್ರಿಯೆ ನೀಡಿದ ಎಚ್ ಡಿ ಕುಮಾರಸ್ವಾಮಿ ಸದ್ಯ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸೆಕ್ಸ್ ಸಿಡಿ ಹಿಂದಿನ ಮಹಾನಾಯಕ ಯಾರು… ಯಾರು.. ಎಂದು ಬೊಬ್ಬೆ ಬಾರಿಸಿದ ಕುಮಾರಸ್ವಾಮಿಯೇ ಈ ಮಹಾನಾಯಕ ಎನ್ನುವ ಗೋಮಾನಿ ಸಾಕಷ್ಟು ಕುತೂಹಲ ಹುಟ್ಟಿಸಿದೆ.

ಸದ್ಯ ಐದು ಕೋಟಿ ರೂ. ಡೀಲ್ ನಡೆದಿದೆ ಎಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ತನಿಖೆಗೆ ಆಗ್ರಹಿಸಿ ಎಸಿಬಿಗೆ ದೂರು ದಾಖಲಾಗಿದೆ.

ವಕೀಲರಾದ ಮಂಜುನಾಥ್ ಮತ್ತು ಸಿದ್ದೇಶ್ ಅವರು ದೂರು ನೀಡಿದ್ದು, ಜಾರಕಿಹೊಳಿ ಅವರಿಗೆ ಇಷ್ಟೊಂದು ಹಣ ಎಲ್ಲಿಂದ ಬಂತು? ಈ ಹಣವನ್ನು ಯಾರಿಗೆ ನೀಡಿದ್ದಾರೆ ಎನ್ನುವ ಬಗ್ಗೆ ತನಿಖೆ ನಡೆಯಬೇಕು. ಈ ಹೇಳಿಕೆ ನೀಡಿದ ಎಚ್ ಡಿ ಕೆಗೆ ಈ ಮಾಹಿತಿ ಎಲ್ಲಿಂದ ಬಂತು ಎಂದೂ ಕೂಡ ಗೊತ್ತಾಗಬೇಕು ಎಂದು ಆಗ್ರಹಿಸಿದ್ದಾರೆ.

ಸಿಡಿ ಪ್ರಕರಣದಲ್ಲಿ ಐದು ಕೋಟಿ ರೂ. ಡೀಲ್ ನಡೆದಿದೆ. ಈ ಬಗ್ಗೆ ನನಗೆ ಮಾಹಿತಿ ಇದೆ. ಮೂರು ತಿಂಗಳ ಹಿಂದೆಯೇ ಸಿಡಿ ಮುಂದಿಟ್ಟು ವ್ಯವಹಾರ ನಡೆಸಲಾಗಿದೆ ಎಂದು ಎಚ್ ಡಿಕೆ ಅವರು ಮೈಸೂರಿನಲ್ಲಿ ಮಾತನಾಡಿದ್ದರು.

error: Content is protected !!