'ಕೋಬ್ರಾ ಕಮಾಂಡೋ ಸುರಕ್ಷಿತ' : ಪ್ರಕಟಣೆ, ಫೋಟೋ ಬಿಡುಗಡೆ ಮಾಡಿದ ನಕ್ಸಲರು - BC Suddi
‘ಕೋಬ್ರಾ ಕಮಾಂಡೋ ಸುರಕ್ಷಿತ’ : ಪ್ರಕಟಣೆ, ಫೋಟೋ ಬಿಡುಗಡೆ ಮಾಡಿದ ನಕ್ಸಲರು

‘ಕೋಬ್ರಾ ಕಮಾಂಡೋ ಸುರಕ್ಷಿತ’ : ಪ್ರಕಟಣೆ, ಫೋಟೋ ಬಿಡುಗಡೆ ಮಾಡಿದ ನಕ್ಸಲರು

ನವದೆಹಲಿ: ಛತ್ತೀಸ್‌ಘಡದಲ್ಲಿ ಎ.3ರಂದು ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಅಪಹರಿಸಲಾಗಿರುವ ಕೋಬ್ರಾ ಪಡೆಯ ರಾಕೇಶ್ವರ ಮನ್ಸಾ ಅವರ ಫೋಟೋವನ್ನು ನಕ್ಸಲರು ಬಿಡುಗಡೆ ಮಾಡಿದ್ದಾರೆ. ಕೋಬ್ರಾ ಕಮಾಂಡೊ ಅಧಿಕಾರಿಯ ಬಿಡುಗಡೆಗಾಗಿ ಮಧ್ಯಸ್ಥರನ್ನು ಕಳುಹಿಸಿ ಎಂದು ಮಾವೋವಾದಿ ನಕ್ಸಲರು ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.

ಪತ್ರದಲ್ಲಿ, ಕೋಬ್ರಾ ಪಡೆಯ ರಾಕೇಶ್ವರ ಮನ್ಸಾ ಅವರು ನಮ್ಮ ಬಳಿ ಸುರಕ್ಷಿತವಾಗಿದ್ದಾರೆ. ಅವರ ಬಿಡುಗಡೆ ಮಾಡಬೇಕು ಎಂದು ಸರ್ಕಾರ ಮಧ್ಯಸ್ಥರನ್ನು ಕಳುಹಿಸಬೇಕು. ನಾವು ಮಾತುಕತೆ ನಡೆಸಲು ಸಿದ್ದರಿದ್ದೇವೆ. ಬಳಿಕ ಅವರನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

ಏತನ್ಮಧ್ಯೆ, ಅಪಹರಿಸಲ್ಪಟ್ಟ ಯೋಧರ ಪತ್ನಿ ಹಾಗೂ ಮಗಳು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ರಾಕೇಶ್ವರ ಮನ್ಸಾ ಅವರು ಸುರಕ್ಷಿತವಾಗಿ ಮರಳಲು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಛತ್ತೀಸ್‌ಘಡದಲ್ಲಿ ಎಪ್ರಿಲ್‌ 3ರಂದು ನಕ್ಸಲ್‌ ಹಾಗೂ ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯ ಸಂದರ್ಭ ನಕ್ಸಲರು ಕೋಬ್ರಾ ಸಿಬ್ಬಂದಿಯನ್ನು ಅಪಹರಿಸಿದ್ದರು. ಘಟನೆಯಲ್ಲಿ 22 ಮಂದಿ ಭದ್ರತಾ ಸಿಬ್ಬಂದಿಗಳು ಹುತಾತ್ಮರಾಗಿದ್ದರು.

ಕಾರಿನಲ್ಲಿ ಒಬ್ಬರೇ ಪ್ರಯಾಣಿಸುವಾಗಲೂ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು: ಮಹತ್ವದ ತೀರ್ಪು ನೀಡಿದ ದೆಹಲಿ ಹೈಕೋರ್ಟ್

error: Content is protected !!