ಮತ್ತೆ ಕಾಣಿಸಿಕೊಂಡ ಜ್ವರ: ರೋಡ್ ಷೋ ಬಿಟ್ಟು ವಾಪಸಾದ ಸಿಎಂ - BC Suddi
ಮತ್ತೆ ಕಾಣಿಸಿಕೊಂಡ ಜ್ವರ: ರೋಡ್ ಷೋ ಬಿಟ್ಟು ವಾಪಸಾದ ಸಿಎಂ

ಮತ್ತೆ ಕಾಣಿಸಿಕೊಂಡ ಜ್ವರ: ರೋಡ್ ಷೋ ಬಿಟ್ಟು ವಾಪಸಾದ ಸಿಎಂ

ಬೆಳಗಾವಿ: ಲೋಕಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ ಪರ ರೋಡ್ ಷೋ ನಡೆಸುತ್ತಿದ್ದ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಮತ್ತೆ ಜ್ವರ ಕಾಣಿಸಿಕೊಂಡಿದೆ. ಕೂಡಲೇ ರೋಡ್ ಷೋ ಮೊಟಕುಗೊಳಿಸಿ ತಾವು ತಂಗಿದ್ದ ಖಾಸಗಿ ಹೋಟೆಲ್ ಗೆ ಯಡಿಯೂರಪ್ಪ ವಾಪಸಾಗಿದ್ದಾರೆ.

ಬೆಳಗಾವಿಯ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ರೋಡ್ ಶೋ ನಡೆಯುತ್ತಿತ್ತು. ರೋಡ್ ಷೋ ನಡೆಯುತ್ತಿದ್ದ ವೇಳೆಯಲ್ಲೇ ಸಿಎಂ ಯಡಿಯೂರಪ್ಪ ಅವರಿಗೆ ಜ್ವರ ಬಂದ ಕಾರಣ ಕೊಂಚ ನಿತ್ರಾಣಗೊಂಡಿದ್ದಾರೆ. ಸದ್ಯ ವೈದ್ಯರ ತಂಡ ಅವರ ಆರೋಗ್ಯ ತಪಾಸಣೆ ನಡೆಸಿದೆ.

ನೀತಿ ಸಂಹಿತೆ ಉಲ್ಲಂಘನೆ ಆರೋಪ: ಜಮೀರ್ ವಿರುದ್ಧ ಜೆಡಿಎಸ್ ದೂರು