ಸಿಎಂ ಬಿ.ಎಸ್‌.ಯಡಿಯೂರಪ್ಪ ಹಾಗೂ ಸಚಿವ ಈಶ್ವರಪ್ಪ ಅವರ ನಡುವೆ ಮತಭೇದ ಇರಬಹುದು, ಆದರೆ, ಮನಭೇದ ಇಲ್ಲ: ಅರುಣ ಸಿಂಗ್ - BC Suddi
ಸಿಎಂ ಬಿ.ಎಸ್‌.ಯಡಿಯೂರಪ್ಪ ಹಾಗೂ ಸಚಿವ ಈಶ್ವರಪ್ಪ ಅವರ ನಡುವೆ ಮತಭೇದ ಇರಬಹುದು, ಆದರೆ, ಮನಭೇದ ಇಲ್ಲ: ಅರುಣ ಸಿಂಗ್

ಸಿಎಂ ಬಿ.ಎಸ್‌.ಯಡಿಯೂರಪ್ಪ ಹಾಗೂ ಸಚಿವ ಈಶ್ವರಪ್ಪ ಅವರ ನಡುವೆ ಮತಭೇದ ಇರಬಹುದು, ಆದರೆ, ಮನಭೇದ ಇಲ್ಲ: ಅರುಣ ಸಿಂಗ್

ಬಸವಕಲ್ಯಾಣ: “ಸಿಎಂ ಬಿ.ಎಸ್‌.ಯಡಿಯೂರಪ್ಪ ಹಾಗೂ ಸಚಿವ ಈಶ್ವರಪ್ಪ ಅವರ ನಡುವೆ ಮತಭೇದ ಇರಬಹುದು, ಆದರೆ, ಮನಭೇದ ಇಲ್ಲ” ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಕರ್ನಾಟಕದ ಉಸ್ತುವಾರಿ ಅರುಣ ಸಿಂಗ್ ಹೇಳಿದ್ದಾರೆ.

ಈ ಕುರಿತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಪ್ರಯುಕ್ತ ಪ್ರಚಾರ ಸಭೆ ನಡೆಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಪ್ರಜಾಪ್ರಭುತ್ವದಲ್ಲಿ ಮತಭೇದ ಇರುವುದು ಸಹಜ. ಅವರಿಬ್ಬರೂ ಒಂದೇ ತಟ್ಟೆಯಲ್ಲಿ ಊಟ ಮಾಡುವವರು ಹಾಗಾಗಿ ಈ ಸಿಟ್ಟು ಸ್ವಲ್ಪ ಹೊತ್ತಿಗೆ ಅಷ್ಟೆ ಸರ್ಕಾರಕ್ಕೇನೂ ತೊಂದರೆ ಇಲ್ಲ” ಎಂದರು.

ಇನ್ನು “ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅನುದಾನ ನೀಡಿದ್ದು, ಮರಾಠಾ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದಾರೆ ಹೀಗಾಗಿ ಅಭ್ಯರ್ಥಿ ಶರಣು ಸಲಗರ ಗೆಲುವು ನಿಶ್ಚಿತವಾಗಿದೆ” ಎಂದು ಹೇಳಿದ್ದಾರೆ.

ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ‘ಕಣ್ಣೇ ಅದರಿಂದಿ’ ಮಂಗ್ಲಿ ಬಾಯಿ