ಶಾಲಾ-ಕಾಲೇಜುಗಳ ಬಂದ್ ಬಗ್ಗೆ ಸಿಂ ಹೇಳಿದ್ದು ಇದ್ದು.! - BC Suddi
ಶಾಲಾ-ಕಾಲೇಜುಗಳ ಬಂದ್ ಬಗ್ಗೆ ಸಿಂ ಹೇಳಿದ್ದು ಇದ್ದು.!

ಶಾಲಾ-ಕಾಲೇಜುಗಳ ಬಂದ್ ಬಗ್ಗೆ ಸಿಂ ಹೇಳಿದ್ದು ಇದ್ದು.!

ಬೆಂಗಳೂರು : ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳನ್ನು ಬಂದ್ ಮಾಡುವಂತಹ ಚಿಂತನೆಯಾಗಲಿ, ಪರೀಕ್ಷೆ ಇಲ್ಲದೇ ಯಾವುದೇ ತರಗತಿ ಮಕ್ಕಳನ್ನು ಮುಂದಿನ ವರ್ಷಕ್ಕೆ ತೇರ್ಗಡೆ ಮಾಡುವಂತಹ ನಿರ್ಧಾರವನ್ನಾಗಲಿ ಸರ್ಕಾರ ಸದ್ಯ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅಧಿಕಾರಿಗಳು ಹಾಗೂ ಹಿರಿಯ ಸಚಿವರೊಂದಿಗೆ ನಡೆಸಿದ ಸಭೆಯ ನಂತ್ರ ಮಾತನಾಡಿದ ಸಿಎಂ, ‘ಶಾಲಾ-ಕಾಲೇಜು ರದ್ದುಗೊಳಿಸುವ ಪ್ರಸ್ತಾಪ ಸರಕಾರದ ಮುಂದಿಲ್ಲ’ ಎಂದಿದ್ದಾರೆ.

ಮನೆಯಲ್ಲಾದರೆ ಮಕ್ಕಳು ಕುಣಿದು ಕುಪ್ಪಳಿಸುತ್ತಾರೆ. ಶಾಲೆಗಳಲ್ಲಾದರೆ ಶಿಸ್ತಿನಿಂದ ಇರ್ತಾನೆ. ಮಕ್ಕಳು ಮನೆಯಲ್ಲಿ ಇರುವುದಕ್ಕಿಂತ ಶಾಲೆಗೆ ಹೋಗುವುದು ಉತ್ತಮ. ಆದ್ದರಿಂದ ಇನ್ನೂ 15 ದಿನಗಳಲ್ಲಿ ಪರೀಕ್ಷೆ ಮಾಡಲಾಗುವುದು. ಪರೀಕ್ಷೆ ಇಲ್ಲದೇ ಪಾಸ್ ಮಾಡುವ ಯೋಚನೆ ಸರಕಾರಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು.

error: Content is protected !!