ಉತ್ತರಾಖಂಡ ಸಿಎಂ ವಿವಾದಾತ್ಮಕ ಹೇಳಿಕೆ: ಟ್ವಿಟರ್‌ನಲ್ಲಿ ಟ್ರೆಂಡ್ ಆದ ಹರಿದ ಜೀನ್ಸ್! - BC Suddi
ಉತ್ತರಾಖಂಡ ಸಿಎಂ ವಿವಾದಾತ್ಮಕ ಹೇಳಿಕೆ: ಟ್ವಿಟರ್‌ನಲ್ಲಿ ಟ್ರೆಂಡ್ ಆದ ಹರಿದ ಜೀನ್ಸ್!

ಉತ್ತರಾಖಂಡ ಸಿಎಂ ವಿವಾದಾತ್ಮಕ ಹೇಳಿಕೆ: ಟ್ವಿಟರ್‌ನಲ್ಲಿ ಟ್ರೆಂಡ್ ಆದ ಹರಿದ ಜೀನ್ಸ್!

ನವದೆಹಲಿ: ಉತ್ತರಖಂಡದ ನೂತನ ಮುಖ್ಯಮಂತ್ರಿ ತೀರತ್ ಸಿಂಗ್ ರಾವತ್ ಹರಿದ ಜೀನ್ಸ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಮಹಿಳೆಯರು, ಹರಿದ ಜೀನ್ಸ್ಫೋ ಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ವಿನೂತನವಾಗಿ ಪ್ರತಿಭಟಿಸುತ್ತಿದ್ದಾರೆ.

ಹರಿದ ಜೀನ್ಸ್ ಧರಿಸುವ ಯುವತಿಯವರು ಸಮಾಜದಲ್ಲಿ ಕೆಟ್ಟ ನಿದರ್ಶನಗಳನ್ನು ಹುಟ್ಟುಹಾಕುತ್ತಿದ್ದಾರೆ ಎಂಬ ರಾವತ್ ಹೇಳಿಕೆ ಮಹಿಳೆಯರ ಆಕ್ರೋಶಕ್ಕೆ ಕಾರಣವಾಗಿದ್ದು, ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಹರಿದ ಜೀನ್ಸ್ಗಳ ಫೋಟೋ ಹಾಕಿ ಅಸಮಾಧಾನ ಹೊರಹಾಕುತ್ತಿದ್ದು, ಟ್ವಿಟರ್ನಲ್ಲಿ ಹರಿದ ಜೀನ್ಸ್? ಟ್ರೆಂಡ್ ಆಗಿದೆ.

ಈ ಕುರಿತಾಗಿ ಟ್ವೀಟ್ ಮಾಡಿರುವ ಸಂಸದೆ ಮತ್ತು ಶಿವಸೇನಾ ನಾಯಕಿ ಪ್ರಿಯಾಂಕ ಚತುರ್ವೇದಿ, “ದೇಶದ ಸಂಸ್ಕೃತಿ ಮತ್ತು ಸಂಸ್ಕಾರ ಮಹಿಳೆಯರನ್ನು ಮತ್ತು ಅವರ ಆಯ್ಕೆಗಳನ್ನು ಕುಳಿತು ನಿರ್ಣಯಿಸುವ ಪುರುಷರಿಂದ ಪ್ರಭಾವಿತವಾಗಿರುತ್ತದೆ” ಎಂದು ಟೀಕಿಸಿದ್ದಾರೆ.

ಇನ್ನು ಇನ್ನೊಬ್ಬರ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಕೇವಲ ಬಟ್ಟೆಯಿಂದ ಅಳೆಯಲಾಗುವುದಿಲ್ಲ. ನೋಡುವ ನೋಟದಲ್ಲೇ ಎಲ್ಲವು ನಿರ್ಧಾರವಾಗುತ್ತದೆ ಎಂದು ಅನೇಕರು ಜಾಲತಾಣದಲ್ಲಿ ತೀರತ್? ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

error: Content is protected !!