ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೆ ಕೊಲೆ ಬೆದರಿಕೆ - BC Suddi
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೆ ಕೊಲೆ ಬೆದರಿಕೆ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೆ ಕೊಲೆ ಬೆದರಿಕೆ

ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಅಪರಿಚಿತರಿಂದ ಕೊಲೆ ಬೆದರಿಕೆ ಬಂದಿದ್ದು, ಇನ್ನು ಉಳಿದಿರುವುದು ನಾಲ್ಕು ದಿನಗಳು ಮಾತ್ರ ಎಂದು ಬೆದರಿಸಿದ್ದಾರೆ. ಉತ್ತರ ಪ್ರದೇಶ ಪೊಲೀಸರ ವಾಟ್ಸ್‌ಆಯಪ್‌ ತುರ್ತು ಡಯಲ್ ಸಂಖ್ಯೆ ‘112’ಕ್ಕೆ ಅಪರಿಚಿತರಿಂದ ಈ ಬೆದರಿಕೆ ಬಂದಿರುವುದಾಗಿ ಮೂಲಗಳು ಹೇಳಿವೆ.

ಈ ಬಗ್ಗೆ ಸುಶಾಂತ್ ಗಾಲ್ಫ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಯಾವ ಸಂಖ್ಯೆಯಿಂದ ಬೆದರಿಕೆ ಬಂದಿದೆ ಎಂಬುದನ್ನು ಪತ್ತೆ ಹಚ್ಚುವ ಪ್ರಯತ್ನಗಳು ನಡೆಯುತ್ತಿವೆ. ವರದಿಗಳ ಪ್ರಕಾರ, ಏಪ್ರಿಲ್ 29 ರ ಸಂಜೆ ಬೆದರಿಕೆಗಳನ್ನು ಸ್ವೀಕರಿಸಲಾಗಿದ್ದು ವ್ಯಕ್ತಿಯನ್ನು ಪತ್ತೆಹಚ್ಚಲು ಪೊಲೀಸರು ಕಣ್ಗಾವಲು ತಂಡ ಹಾಗೂ ತನಿಖೆ ನಡೆಸಿ ಬಂಧಿಸಲು ತಂಡವನ್ನು ರಚಿಸಲಾಗಿದೆ. ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಯೋಗಿ ಅವರಿಗೆ ಈ ಹಿಂದೆ ಕೂಡ ಹಲವಾರೌ ಬಾರಿ ಕೊಲೆ ಬೆದರಿಕೆ ಬಂದಿವೆ. ಕಳೆದ ಸೆಪ್ಟೆಂಬರ್, ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಆದಿತ್ಯನಾಥ್‌ಗೆ ಬೆದರಿಕೆ ಕರೆಗಳು ಬಂದಿರುವುದಾಗಿ ಪೊಲೀಸರು ಹೇಳಿದ್ದಾರೆ. ಈ ಪೈಕಿ ನವೆಂಬರ್‌ನಲ್ಲಿ ಬಂದಿದ್ದ ಕೊಲೆ ಬೆದರಿಕೆಯನ್ನು ಕಳಿಸಿದ್ದವ 15 ವರ್ಷದ ಬಾಲಕನಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದರು. ರಿಮಾಂಡ್‌ ಹೋಂಗೆ ಆತನನ್ನು ಕಳುಹಿಸಲಾಗಿದೆ.
ಯೋಗಿ ಆದಿತ್ಯನಾಥ ಅವರಿಗೆ 2017 ರಲ್ಲಿ ಜೆಡ್‌ಪ್ಲಸ್ ಭದ್ರತೆ, ವಿವಿಪಿ ಸಶಸ್ತ್ರ ಭದ್ರತಾ ಸುರಕ್ಷತೆ ನೀಡಲಾಗಿತ್ತು. ಸದ್ಯ ಇವರಿಗೆ 25-28 ಸಶಸ್ತ್ರ ಕಮಾಂಡೋಗಳ ಭದ್ರತೆ ನೀಡಲಾಗಿದೆ. ಬೆದರಿಕೆ ಕರೆಯಿಂದಾಗಿ ಮತ್ತಷ್ಟು ಭದ್ರತೆ ಹೆಚ್ಚಿಸಲಾಗಿದೆ. ಅವರ ಸಂಚಾರಕ್ಕೆ ಸಿಐಎಸ್‌ಎಫ್ ಕಮಾಂಡೋಗಳ ತಂಡವು ಭದ್ರತೆ ಒದಗಿಸುತ್ತಿದೆ.

ಕೊರೊನಾ ಕಾರಣದಿಂದಾಗಿ ಶಾಲೆಗಳನ್ನು ಮುಚ್ಚಲಾಗಿದೆ: ಈ ಹಿನ್ನೆಲೆಯಲ್ಲಿ ಆನ್‌ಲೈನ್‌ ತರಗತಿಗಳ ಶುಲ್ಕ ಕಡಿಮೆ ಮಾಡಿ: ಶಾಲೆಗಳಿಗೆ ಸುಪ್ರೀಂ ಆದೇಶ