ಪಂಚರಾಜ್ಯಗಳ ಚುನಾವಣೆ ನಂತರ ರಾಜ್ಯದಲ್ಲಿ ಮುಖ್ಯ ಮಂತ್ರಿ ಬದಲಾವಣೆ.! - BC Suddi
ಪಂಚರಾಜ್ಯಗಳ ಚುನಾವಣೆ ನಂತರ ರಾಜ್ಯದಲ್ಲಿ ಮುಖ್ಯ ಮಂತ್ರಿ ಬದಲಾವಣೆ.!

ಪಂಚರಾಜ್ಯಗಳ ಚುನಾವಣೆ ನಂತರ ರಾಜ್ಯದಲ್ಲಿ ಮುಖ್ಯ ಮಂತ್ರಿ ಬದಲಾವಣೆ.!

ವಿಜಯಪುರ : ಐದು ರಾಜ್ಯಗಳ ಚುನಾವಣೆ ನಂತರ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ನಿಶ್ಚಿತ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.

ಇಂದಿನ ಸಿಎಂ ಇಟ್ಟುಕೊಂಡು ಮುಂದಿನ ಚುನಾವಣೆಗೆ ಹೋದ್ರೆ ಏನಂತ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗೂ ಗೊತ್ತಿದೆ. ಬಿಜೆಪಿ ಉಳಿಯಬೇಕಾದರೆ ಈ ಸಿಎಂ ಬದಲಾವಣೆ ಅವಶ್ಯಕ ಎಂದು ಹೇಳುವ ಮೂಲಕ ಮತ್ತೊಮ್ಮೆ ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧ ಕಿಡಿಕಾರಿದ್ದಾರೆ.

ಸಿಎಂ ಬಿ.ಎಸ್. ಯಡಿಯೂರಪ್ಪ ಶಾಸಕರಿಗೆ ಬೇಕಾಬಿಟ್ಟಿಯಾಗಿ ಅನುದಾನ ಹಂಚಿದ್ದಾರೆ. ಎಲ್ಲಾ ಶಾಸಕರನ್ನು ಸರಿಸಮಾನವಾಗಿ ಕಾಣಬೇಕಿತ್ತು. ಶಿವಮೊಗ್ಗ ಏರ್ ಪೋರ್ಟ್ ಗೆ 380 ಕೋಟಿ ರೂ. ವಿಜಯಪುರ ಏರ್ ಪೋರ್ಟ್ ಗೆ 220 ಕೋಟಿ ರೂ. ನೀಡಲಾಗಿದೆ. ಜನಪ್ರತಿನಿಧಿಯಾಗಿ ನಾನು ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕಲ್ಲವೇ? ದಕ್ಷಿಣ ಭಾರತದಲ್ಲಿ ಇವರೇ ಕೊನೆಯ ಸಿಎಂ ಅಲ್ಲ ಎಂದರು.

error: Content is protected !!