ರಾಜಸ್ತಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ಗೆ ಕೊರೊನಾ ಸೋಂಕು ದೃಢ..! - BC Suddi
ರಾಜಸ್ತಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ಗೆ ಕೊರೊನಾ ಸೋಂಕು ದೃಢ..!

ರಾಜಸ್ತಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ಗೆ ಕೊರೊನಾ ಸೋಂಕು ದೃಢ..!

ಜೈಪುರ : ರಾಜಸ್ತಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ನಿನ್ನೆಯಷ್ಟೇ ಅವರ ಪತ್ನಿ ಸುನಿತಾ ಗೆಹ್ಲೋಟ್‌ಗೆ ಕೊರೊನಾ ಸೋಂಕು ದೃಢಪಟ್ಟಿತ್ತು.

ಬುಧವಾರ ಟ್ವೀಟ್‌ ಮಾಡಿದ್ದ ಅವರು, ”ನನ್ನ ಪತ್ನಿ ಸುನೀತಾ ಗೆಹ್ಲೋಟ್‌ಗೆ ಕೊರೊನಾ ಸೋಂಕು ದೃಢಪಟ್ಟಿದೆ. ಮಾರ್ಗಸೂಚಿಯಂತೆ ಮನೆಯಲ್ಲೇ ಅವರಿಗೆ ಚಿಕಿತ್ಸೆ ಪ್ರಾರಂಭವಾಗಿದೆ. ಈಗ ನಾನು ಮುಂಜಾಗ್ರತಾ ಕ್ರಮವಾಗಿ ಪ್ರತ್ಯೇಕತೆಯಲ್ಲಿದ್ದು ಪ್ರತಿದಿನ ರಾತ್ರಿ 8.30 ಕ್ಕೆ ಆನ್‌ಲೈನ್ ಮೂಲಕ ವೈದ್ಯರು ಮತ್ತು ಅಧಿಕಾರಿಗಳೊಂದಿಗೆ ಕೋವಿಡ್ ವಿಮರ್ಶೆ ಸಭೆ ನಡೆಸುತ್ತೇನೆ” ಎಂದು ಹೇಳಿದ್ದರು.

ಗುರುವಾರ ಬೆಳಿಗ್ಗೆ ಮತ್ತೆ ಟ್ವೀಟ್‌ ಮಾಡಿರುವ ಅವರು, ”ಇಂದು ನನ್ನ ಕೊರೊನಾ ವರದಿಯೂ ಪಾಸಿಟಿವ್‌ ಎಂದು ತಿಳಿದು ಬಂದಿದೆ. ನನಗೆ ಯಾವುದೇ ಕೊರೊನಾ ಲಕ್ಷಣಗಳಿಲ್ಲ, ಆರೋಗ್ಯವಾಗಿದ್ದೇನೆ. ಕೊರೊನಾ ಮಾರ್ಗಸೂಚಿಯಂತೆ ನಾನು ಪ್ರತ್ಯೇಕ ವಾಸ ಮಾಡುತ್ತೇನೆ” ಎಂದು ತಿಳಿಸಿದ್ದಾರೆ.

ಕೆಲಸದಿಂದ ನೌಕರರನ್ನು ವಜಾಗೊಳಿಸಬೇಡಿ: ಕಂಪನಿ, ಕಾರ್ಖಾನೆಗಳಿಗೆ ಮಹತ್ವದ ಆದೇಶ