ಛತ್ತೀಸ್‌ಗಡದಲ್ಲಿ ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯ ಬಳಿಕ 21 ಯೋಧರು ನಾಪತ್ತೆ - BC Suddi
ಛತ್ತೀಸ್‌ಗಡದಲ್ಲಿ ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯ ಬಳಿಕ 21 ಯೋಧರು ನಾಪತ್ತೆ

ಛತ್ತೀಸ್‌ಗಡದಲ್ಲಿ ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯ ಬಳಿಕ 21 ಯೋಧರು ನಾಪತ್ತೆ

ರಾಯ್‌ಪುರ್: ಛತ್ತೀಸ್‌ಗಡದ ಸುಕ್ಮಾದಲ್ಲಿ ಶನಿವಾರ ಯೋಧರು ಹಾಗೂ ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯ ಬಳಿಕ 21 ಯೋಧರು ನಾಪತ್ತೆಯಾಗಿದ್ದಾರೆ. ಕಾರ್ಯಾಚರಣೆ ನಡೆದ ಸ್ಥಳಕ್ಕೆ ಸರ್ಕಾರ ಹೆಚ್ಚುವರಿ ಭದ್ರತಾ ಪಡೆಯನ್ನು ಕಳುಹಿಸಿದೆ.

ಈ ವೇಳೆ ಹುತಾತ್ಮರಾಗಿರುವ ಐವರು ಯೋಧರ ಪೈಕಿ ಇಬ್ಬರ ಮೃತದೇಹ ಪತ್ತೆಯಾಗಿದೆ. ಗಾಯಗೊಂಡಿದ್ದ ಯೋಧರ ಪೈಕಿ 23 ಮಂದಿಯನ್ನು ಬಿಜಾಪುರ್‌ ಆಸ್ಪತ್ರೆಗೆ ಹಾಗೂ ಏಳು ಮಂದಿಯನ್ನು ರಾಯ್‌ಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಛತ್ತೀಸ್‌ಗಢ ಪೊಲೀಸರು ಹೇಳಿದ್ದಾರೆ.

ಯೋಧರ ಬಲಿದಾನಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂತಾಪ ಸೂಚಿಸಿದ್ದು, “ಯೋಧರ ಬಲಿದಾನವನ್ನು ದೇಶ ಎಂದಿಗೂ ಮರೆಯುವುದಿಲ್ಲ. ಯೋಧರ ಕುಟುಂಬದೊಂದಿಗೆ ನಾವಿದ್ದೇವೆ. ವೈರಿಗಳ ವಿರುದ್ದದ ಹೋರಾಟ ಮುಂದುವರೆಯಲಿದೆ” ಎಂದಿದ್ದಾರೆ.

error: Content is protected !!