ಬೆಂಗಳೂರು: ಕನ್ನಡದ ಬಿಗ್ ಬಾಸ್ ಖ್ಯಾತಿಯ, ನಟಿ ಚೈತ್ರಾ ಕೋಟೂರು ಮದುವೆಯಾಗಿದ್ದಾರೆ. ಆದರೆ ಮದುವೆಯಾದ ಬೆನ್ನಲ್ಲೇ ಚೈತ್ರಾ ಮದುವೆ ಸುತ್ತ ವಿವಾದ ಹತ್ತಿಕೊಂಡಿದೆ. ಚೈತ್ರಾ ಮಂಡ್ಯ ಮೂಲದ ನಾಗಾರ್ಜುನ ಎಂಬವರನ್ನು ಕೋಲಾರದ ದೇವಾಲಯವೊಂದರಲ್ಲಿ ಮದುವೆಯಾಗಿದ್ದಾರೆ.
ಮದುವೆಯಾದ ಸಂಜೆಯೇ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಚೈತ್ರಾ ಬಲವಂತವಾಗಿ ನಾಗಾರ್ಜುನ ಅವರನ್ನು ಮದುವೆಯಾಗಿದ್ದಾರೆ ಎಂದು ವರನ ಕಡೆಯವರು ಗಲಾಟೆ ಮಾಡಿದ್ದಾರೆ. ನಾಗಾರ್ಜುನನಿಗೆ ಮದುವೆಯಾಗಲು ಇಷ್ಟವಿರಲಿಲ್ಲ. ಹಾಗಿದ್ದರೂ ಬಲವಂತವಾಗಿ ಮದುವೆಯಾಗಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಲ್ಲದೆ, ಗಲಾಟೆ ಮಾಡಿದ್ದಾರೆ. ವಿಶೇಷವೆಂದರೆ ಇವರ ಮದುವೆ ಯಾವುದೇ ಸಂಪ್ರದಾಯಗಳಿಲ್ಲದೇ ತಾಳಿ ಕಟ್ಟುವ ಶಾಸ್ತ್ರದ ಮೂಲಕ ನಡೆದಿದೆ.
ಚೈತ್ರಾ ಕೋಟೂರು ಮತ್ತು ವರ ನಾಗಾರ್ಜುನ ಇಬ್ಬರೂ ಮದುವೆ ದಿರಿಸನ್ನೂ ಧರಿಸಿರಲಿಲ್ಲ. ದೇವಾಲಯದಲ್ಲಿ ಮದುವೆಯಾಗಿದ್ದರು. ಆದರೆ ಈ ಮದುವೆ ಸಂಜೆಯ ವೇಳೆ ಪೊಲೀಸ್ ಠಾಣೆಯ ಮೆಟ್ಟಿಲೇರಿರುವುದು, ಅವರ ಮದುವೆಯ ವಿಡಿಯೋ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.