ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್‌ಬಾಸ್‌ ಖ್ಯಾತಿಯ ಚೈತ್ರಾ ಕೊಟ್ಟೂರು - BC Suddi
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್‌ಬಾಸ್‌ ಖ್ಯಾತಿಯ ಚೈತ್ರಾ ಕೊಟ್ಟೂರು

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್‌ಬಾಸ್‌ ಖ್ಯಾತಿಯ ಚೈತ್ರಾ ಕೊಟ್ಟೂರು

ಬೆಂಗಳೂರು: ನಿರ್ದೇಶಕಿ, ಕಲಾವಿದೆ ಹಾಗೂ ಬಿಗ್‌ಬಾಸ್‌ ಖ್ಯಾತಿಯ ಚೈತ್ರಾ ಕೊಟ್ಟೂರು ಅವರು ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಬೆಂಗಳೂರಿನ ಬ್ಯಾಟರಾಯಪುರದ ಗಣಪತಿ ದೇವಾಲಯದಲ್ಲಿ ಚೈತ್ರಾ ಕೊಟ್ಟೂರು, ನಾಗರ್ಜುನ್ ಜೊತೆ ಇಂದು ಬೆಳಗ್ಗೆ ಸಪ್ತಪದಿ ತುಳಿದಿದ್ದಾರೆ. ಚೈತ್ರಾ ಹಾಗೂ ನಾಗರ್ಜುನ್ ಹಲವು ವರ್ಷಗಳಿಂದ ಇಬ್ಬರು ಪ್ರೀತಿಸುತ್ತಿದ್ದರು. ಇಂದು ಸದ್ದಿಲ್ಲದೆ ಚೈತ್ರಾ ಅವರು ಸರಳವಾಗಿ ಮದುವೆಯಾದ ಫೋಟೋಗಳು ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡುತ್ತಿವೆ.

ಅಖಂಡ ಕರ್ನಾಟಕ ರಕ್ಷಣಾ ಸೇವಾದಳ ರಾಜ್ಯಾಧ್ಯಕ್ಷ ಸಿಂಹ ಶಿವು ಗೌಡರವರ ನೇತೃತ್ವದಲ್ಲಿ ಶೈಲೇಂದ್ರ ಕುಮಾರ್ ಅವರ ಉಪಸ್ಥಿತಿಯಲ್ಲಿ ಮಂಗಲ ಕಾರ್ಯ ನಡೆದಿದೆ. ಕೆಲವು ಮೂಲಗಳ ಪ್ರಕಾರ ಯುವಕ ನಾಗರ್ಜುನ್ ಮೂಲತಃ ಮಂಡ್ಯದವರಾಗಿದ್ದು, ಅವರ ಮನವೊಲಿಸಿ ಸರಳವಾಗಿ ಮದುವೆ ಮಾಡಿಸಲಾಗಿದೆ ಎನ್ನಲಾಗಿದೆ.

ಚೈತ್ರಾಕೊಟ್ಟೂರು ಇತ್ತೀಚೆಗಷ್ಟೇ ಹುಡುಗರು ತುಂಬಾ ಒಳ್ಳೆಯವರು ಎಂಬ ಹಾಡೊಂದನ್ನು ಬಿಡುಗಡೆಗೊಳಿಸಿದ್ದರು. ಈ ಹಾಡು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಅಲ್ಲದೆ ಖಾಸಗಿ ವಾಹಿನಿಯೊಂದರ ಸಿರಿಯಲ್‍ನಲ್ಲಿ ಚೈತ್ರಾಕೊಟ್ಟೂರು ಅಭಿನಯಿಸಿದ್ದರು.

‘ದೇಶದ ಜನರು ನಡೆಸಿದ ಜನತಾ ಕರ್ಫ್ಯೂ ಜಗತ್ತಿಗೆ ಸ್ಪೂರ್ತಿ’ – ಮನ್‌‌ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ

error: Content is protected !!