ಕೇಂದ್ರ ಸರ್ಕಾರ ಲಸಿಕೆ ತಂತ್ರವನ್ನು ನೋಟ್‌ ಬ್ಯಾನ್‌ಗೆ ಹೋಲಿಕೆ ಮಾಡಿದ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ - BC Suddi
 ಕೇಂದ್ರ ಸರ್ಕಾರ ಲಸಿಕೆ ತಂತ್ರವನ್ನು ನೋಟ್‌ ಬ್ಯಾನ್‌ಗೆ ಹೋಲಿಕೆ ಮಾಡಿದ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ

 ಕೇಂದ್ರ ಸರ್ಕಾರ ಲಸಿಕೆ ತಂತ್ರವನ್ನು ನೋಟ್‌ ಬ್ಯಾನ್‌ಗೆ ಹೋಲಿಕೆ ಮಾಡಿದ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ

ನವದೆಹಲಿ : ಕೇಂದ್ರ ಸರ್ಕಾರ ಲಸಿಕೆ ತಂತ್ರವನ್ನು ನೋಟ್‌ ಬ್ಯಾನ್‌ಗೆ ಹೋಲಿಕೆ ಮಾಡಿರುವ ಕಾಂಗ್ರೆಸ್‌ ಮುಖಂಡ, ಸಂಸದ ರಾಹುಲ್‌ ಗಾಂಧಿ ಕೇಂದ್ರ ಸರ್ಕಾರದ ಲಸಿಕೆ ತಂತ್ರವು ನೋಟ್‌ ಬ್ಯಾನ್‌ಗಿಂತ ಕಡಿಮೆಯೇನಿಲ್ಲ ಎಂದು ಹೇಳಿದ್ದಾರೆ. ಕೊರೊನಾ ಲಸಿಕೆ ಅಭಿಯಾನದ ಬಗ್ಗೆ ಟ್ವೀಟ್‌ ಮೂಲಕ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ ಅವರು, ”ಕೇಂದ್ರ ಸರ್ಕಾರದ ಲಸಿಕೆ ತಂತ್ರವು ನೋಟ್‌ ಬ್ಯಾನ್‌ಗಿಂತ ಕಡಿಮೆಯೇನಿಲ್ಲ.

ಜನರು ಸಾಲಿನಲ್ಲಿ ನಿಲ್ಲಬೇಕಾಗುತ್ತದೆ. ಹಣ, ಆರೋಗ್ಯ ಹಾಗೂ ಪ್ರಾಣ ನಷ್ಟವನ್ನೂ ಅನುಭವಿಸಬೇಕಾಗುತ್ತದೆ. ಕೊನೆಯಲ್ಲಿ, ಕೆಲವೇ ಕೈಗಾರಿಕೋದ್ಯಮಿಗಳು ಮಾತ್ರ ಪ್ರಯೋಜನ ಪಡೆಯುತ್ತಾರೆ” ಎಂದು ಹೇಳಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರದ ನೋಟ್‌ ಬ್ಯಾನ್‌ ಹಾಗೂ ಲಸಿಕೆ ತಂತ್ರವು ಕೇವಲ ಕೈಗಾರಿಕೋದ್ಯಮಿಗಳಿಗೆ ಉಪಯುಕ್ತವಾಗಿದ್ದು ಸಾಮಾನ್ಯ ಜನರಿಗೆ ಅಲ್ಲ ಎಂದು ಆರೋಪಿಸಿದ್ದಾರೆ. ಮೇ 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟವರು ಕೊರೊನಾ ಲಸಿಕೆ ಪಡೆಯಬಹುದಾಗಿದೆ.

 

ಮುಂಬೈ: ಕೋವಿಡ್ ಗೆ ವೈದ್ಯೆ ಬಲಿ : ಸಾವಿಗೂ ಮುನ್ನ ಮಾಡಿದ ಪೋಸ್ಟ್ ಮನಕಲಕುವಂತಿದೆ