ಕೋವಿಡ್ ಲಸಿಕೆ ರಫ್ತಿನ ಮೇಲೆ ನಿರ್ಬಂಧವಿಲ್ಲ : ಕೇಂದ್ರ ಸ್ಪಷ್ಟನೆ - BC Suddi
ಕೋವಿಡ್ ಲಸಿಕೆ ರಫ್ತಿನ ಮೇಲೆ ನಿರ್ಬಂಧವಿಲ್ಲ : ಕೇಂದ್ರ ಸ್ಪಷ್ಟನೆ

ಕೋವಿಡ್ ಲಸಿಕೆ ರಫ್ತಿನ ಮೇಲೆ ನಿರ್ಬಂಧವಿಲ್ಲ : ಕೇಂದ್ರ ಸ್ಪಷ್ಟನೆ

ನವದೆಹಲಿ : ಡೆಡ್ಲಿ ಸೋಂಕು ಕೊರೊನಾ ತಡೆಗಟ್ಟಲು ಲಸಿಕೆ ಲಭಿಸಿದೆ. ಆದ್ರೆ ಈ ಲಸಿಕೆ ರಫ್ತಿನ ಮೇಲೆ ನಿರ್ಬಂಧ ಹೇರಲಾಗಿದೆ ಎನ್ನುವ ಉಹಾಪೋಹಗಳಿಗೆ ಕೇಂದ್ರ ಸ್ಪಷ್ಟನೆ ನೀಡಿದೆ.ಕೊರೊನಾ ಲಸಿಕೆ ರಫ್ತಿನ ಮೇಲೆ ಕೇಂದ್ರ ಸರ್ಕಾರವು ಯಾವುದೇ ನಿರ್ಬಂಧ ಹೇರಿಲ್ಲ, ಎಂದಿನಂತೆ ಮಿತ್ರ ರಾಷ್ಟ್ರಗಳಿಗೆ ಲಸಿಕೆ ರಫ್ತಾಗಲಿದೆ ಎಂದು ಮೂಲಗಳು ತಿಳಿಸಿವೆ.

ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಇತರೆ ಹಲವು ದೇಶಗಳಿಗಿಂತ ಭಿನ್ನವಾಗಿ ಭಾರತವು ಕೋವಿಡ್-19 ಲಸಿಕೆಗಳ ರಫ್ತಿಗೆ ಯಾವುದೇ ನಿಷೇಧವನ್ನು ವಿಧಿಸಿಲ್ಲ ಮತ್ತು ಹಂತ ಹಂತವಾಗಿ ಲಸಿಕೆಯನ್ನು ವಿತರಣೆ ಮಾಡಲಾಗುತ್ತದೆ. ದೇಶೀಯ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಪಾಲುದಾರ ರಾಷ್ಟ್ರಗಳಿಗೆ ಲಸಿಕೆ ಪೂರೈಸುವ ಬಗ್ಗೆ ಭಾರತ ತನ್ನ ನಿಲುವು ಪ್ರಕಟಿಸಿದೆ.

ಲಸಿಕೆ ವಿಚಾರವಾಗಿ ತನ್ನ ನಿಲುವಿನಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲ. ಮಿತ್ರರಾಷ್ಟ್ರಗಳಿಗೆ ನಿಗದಿಯಂತೆ ಲಸಿಕೆ ಪೂರೈಕೆಯಾಗಲಿದೆ ಎಂದು ಸ್ಪಷ್ಟಪಡಿಸಿದೆ.

error: Content is protected !!