ಕೇಂದ್ರ ಸರ್ಕಾರದ ಅಧೀನದ ಸಿಪಿಆರ್‍ಐನಲ್ಲಿ 25 ಹುದ್ದೆಗಳಿಗೆ ಅರ್ಜಿ ಆಹ್ವಾನ - BC Suddi
ಕೇಂದ್ರ ಸರ್ಕಾರದ ಅಧೀನದ ಸಿಪಿಆರ್‍ಐನಲ್ಲಿ 25 ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೇಂದ್ರ ಸರ್ಕಾರದ ಅಧೀನದ ಸಿಪಿಆರ್‍ಐನಲ್ಲಿ 25 ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಸೆಂಟ್ರಲ್ ಪವರ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ (ಸಿಪಿಆರ್‍ಐ)ನಲ್ಲಿ ವಿವಿಧ 25 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಸಿಪಿಆರ್‍ಐ ಬೆಂಗಳೂರು ಸೇರಿ ಇತರ 7 ರಾಜ್ಯಗಳಲ್ಲಿ ಪ್ರಧಾನ ಕಚೇರಿ ಹೊಂದಿದೆ. ನೇಮಕ ಮಾಡಿಕೊಳ್ಳಲಾಗುತ್ತಿರುವ ಹುದ್ದೆಗಳು 2 ವರ್ಷದ ಒಪ್ಪಂದಕ್ಕೆ ಒಳಪಟ್ಟಿದ್ದು, ಅಭ್ಯರ್ಥಿಗಳ ಕಾರ್ಯಕ್ಷಮತೆ, ಸಂಸ್ಥೆಯ ಅವಶ್ಯಕತೆಗೆ ಅನುಗುಣವಾಗಿ ಅವಧಿ ವಿಸ್ತರಿಸಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳನ್ನು ಯಾವ ನಗರಕ್ಕೆ ಬೇಕಾದರೂ ನೇಮಕ ಮಾಡಬಹುದಾಗಿದೆ.

ಹುದ್ದೆ ವಿವರ
* ಇಂಜಿನಿಯರಿಂಗ್ ಅಸಿಸ್ಟೆಂಟ್ (ಎಲೆಕ್ಟ್ರಿಕಲ್-5, ಸಿವಿಲ್-1)– 6
* ಟೆಕ್ನಿಷಿಯನ್ ಗ್ರೇಡ್ 2 – 7
* ಅಸಿಸ್ಟೆಂಟ್ ಗ್ರೇಡ್ 2 – 5
* ಸ್ಟೆನೋಗ್ರಾಫರ್ ಗ್ರೇಡ್ 3 – 3
* ಎಂಟಿಎಸ್ ಗ್ರೇಡ್ 1 (ವಾಚ್‍ಮನ್) – 4

ಮೀಸಲಾತಿ: ಸಿಪಿಆರ್‍ಐನಲ್ಲಿರುವ 25 ಹುದ್ದೆಗಳಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 17 ಸ್ಥಾನ, ಎಸ್‌ಟಿಗೆ 1, ಎಸ್‌ಟಿಗೆ 1, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 4, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 2 ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಇದರಲ್ಲಿ ವಾಚ್‍ಮನ್ ಹುದ್ದೆಗಳನ್ನು ಮಾಜಿ ಸೈನಿಕರಿಗೆ ಮೀಸಲಿರಿಸಲಾಗಿದೆ. ಅಲ್ಲದೇ ಅಂಗವಿಕಲ ಅಭ್ಯರ್ಥಿಗಳಿಗೂ ಮೀಸಲಾತಿಯಲ್ಲಿ ಸ್ಥಾನ ನೀಡಲಾಗಿದೆ.

ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ ಉತ್ತೀರ್ಣ, ಎಲೆಕ್ಟ್ರಿಕಲ್/ ಸಿವಿಲ್ ಇಂಜಿನಿಯರಿಂಗ್‍ನಲ್ಲಿ 3 ವರ್ಷದ ಡಿಪ್ಲೋಮಾ, ಎಲೆಕ್ಟ್ರಿಷಿಯನ್ ಟ್ರೇಡ್‌ನಲ್ಲಿ 2 ವರ್ಷದ ಐಟಿಐ, ಕಾಮರ್ಸ್/ ಬಿಜಿನೆಸ್ ಅಡ್ಮಿನಿಸ್ಟ್ರೇಷನ್/ ಬಿಜಿನೆಸ್ ಮ್ಯಾನೇಜ್‍ಮೆಂಟ್‍ನಲ್ಲಿ ಪದವಿ, ಆರ್ಟ್ಸ್​/ ಕಾಮರ್ಸ್/ ಸೈನ್ಸ್ ಪದವಿ.

ವಯೋಮಿತಿ: 5.4.2021ಕ್ಕೆ ಅನ್ವಯವಾಗುವಂತೆ ಹುದ್ದೆಗಳಿಗೆ ಅನುಗುಣವಾಗಿ ಗರಿಷ್ಠ 30, 35, 45 ವರ್ಷ. ಸರ್ಕಾರದ ನಿಯಮದನ್ವಯ ಮೀಸಲಾತಿ ಅಭ್ಯರ್ಥಿಗಳಿಗೆ ವಯೋ ಸಡಿಲಿಕೆ ಇದೆ.

ವೇತನ: ಇಂಜಿನಿಯರಿಂಗ್ ಅಸಿಸ್ಟೆಂಟ್‍ಗೆ ಮಾಸಿಕ 35,400-1,12,400 ರೂ., ಟೆಕ್ನಿಷಿಯನ್ ಗ್ರೇಡ್ 2ಗೆ ಮಾಸಿಕ 21,700 – 69,100 ರೂ., ಎಂಟಿಎಸ್ ಗ್ರೇಡ್ 1ಗೆ ಮಾಸಿಕ 18,000-56,900 ರೂ. ಹಾಗೂ ಉಳಿದ ಹುದ್ದೆಗಳಿಗೆ ಮಾಸಿಕ 25,500-81,100 ರೂ. ವೇತನ ಇದೆ.

ಆಯ್ಕೆ ಪ್ರಕ್ರಿಯೆ: ಹುದ್ದೆಗಳಿಗೆ ಅನುಗುಣವಾಗಿ ಬಹು ಆಯ್ಕೆ ಮಾದರಿ ಪರೀಕ್ಷೆ, ಕೌಶಲ ಪರೀಕ್ಷೆ, ಸ್ಟೆನೋಗ್ರಾಫರ್ ಪರೀಕ್ಷೆ, ಟ್ರೇಡ್ ಪರೀಕ್ಷೆ ಹಾಗೂ ದಾಖಲೆ ಪರಿಶೀಲನೆ ನಡೆಸಿ ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸಲು ಕೊನೆಯ ದಿನ: 5.4.2021
ಅಧಿಸೂಚನೆಗೆ: https://bit.ly/3rWtOiE
ಮಾಹಿತಿಗೆ: http://www.cpri.in

error: Content is protected !!