ವರ್ಣರಂಜಿತ ಮಾಸ್ಕ್‌ ಧರಿಸಿ ಮನೆಯಲ್ಲೇ ಹೋಳಿ ಆಚರಿಸಿ: ಸಿಎಂ ಬಿಎಸ್‌ವೈ - BC Suddi
ವರ್ಣರಂಜಿತ ಮಾಸ್ಕ್‌ ಧರಿಸಿ ಮನೆಯಲ್ಲೇ ಹೋಳಿ ಆಚರಿಸಿ: ಸಿಎಂ ಬಿಎಸ್‌ವೈ

ವರ್ಣರಂಜಿತ ಮಾಸ್ಕ್‌ ಧರಿಸಿ ಮನೆಯಲ್ಲೇ ಹೋಳಿ ಆಚರಿಸಿ: ಸಿಎಂ ಬಿಎಸ್‌ವೈ

ಬೆಂಗಳೂರು: ಹೋಳಿ ಹಬ್ಬದ ಸಂಭ್ರಮದಲ್ಲಿರುವ ರಾಜ್ಯದ ಜನತೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಂದು ಸಂದೇಶ ನೀಡಿದ್ದಾರೆ.

ಕೋವಿಡ್‌ ಸಂದರ್ಭದಲ್ಲಿ ಎಲ್ಲರೂ ವರ್ಣರಂಜಿತ ಮಾಸ್ಕ್‌ ಧರಿಸಿ ಸುರಕ್ಷಿತವಾಗಿ ಮನೆಯಲ್ಲಿರಿ ಎಂದು ಯಡಿಯೂರಪ್ಪ ಟ್ವೀಟ್‌ ಮಾಡಿ ಸಲಹೆ ನೀಡಿದ್ದಾರೆ.

ʻಈ ಸವಾಲಿನ ಸಂದರ್ಭಗಳಲ್ಲಿ ಕೊರೊನಾ ಹರಡುವಿಕೆ ನಿರ್ಲಕ್ಷಿಸಬೇಡಿ. ಯಾವುದೇ ಹಬ್ಬದ ಆಚರಣೆ ಕೊರೊನಾಗೆ ಹಬ್ಬವಾಗದಿರಲಿ. ಈ ಬಾರಿ ಹೋಳಿ ಹಬ್ಬವನ್ನು ಕೂಡ ಸುರಕ್ಷಿತವಾಗಿ ಮನೆಯಲ್ಲೇ ಆಚರಿಸಿ. ವರ್ಣರಂಜಿತ ಮಾಸ್ಕ್ ಧರಿಸಿ, ಸಾರ್ವಜನಿಕ ಅಂತರ ಅತ್ಯಗತ್ಯ. ಸರ್ಕಾರದ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಿʼ ಎಂದು ಸಿಎಂ ಮನವಿ ಮಾಡಿದ್ದಾರೆ.

 

BREAKING NEWS: ನಿರ್ಮಾಣ ಹಂತದಲ್ಲಿದ್ದ ಮೇಲ್ಸೇತುವೆ ಕುಸಿತ – ಮೂವರು ಕಾರ್ಮಿಕರಿಗೆ ಗಾಯ

error: Content is protected !!