‘ಸಿಡಿ ಲೇಡಿ’ ಗೆ ಕಾಂಗ್ರೆಸ್ ಶಾಸಕಿಯರ ಸಾಥ್! - BC Suddi
‘ಸಿಡಿ ಲೇಡಿ’ ಗೆ ಕಾಂಗ್ರೆಸ್ ಶಾಸಕಿಯರ ಸಾಥ್!

‘ಸಿಡಿ ಲೇಡಿ’ ಗೆ ಕಾಂಗ್ರೆಸ್ ಶಾಸಕಿಯರ ಸಾಥ್!

ಬೆಂಗಳೂರು: ರಾಜ್ಯರಾಜಕಾರಣದಲ್ಲಿ ಕೋಲಾಹಲ ಸೃಷ್ಟಿಸಿದ ಸಿಡಿ ಲೇಡಿ ಗೆ ಸದ್ಯ ಕಾಂಗ್ರೆಸ್ ಶಾಸಕಿಯರು ಬೆಂಬಲ ನೀಡುತ್ತಿದ್ದಾರೆ.
ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣದ ‘ಸಂತ್ರಸ್ತ’ ಯುವತಿ ಪರ ಮಹಿಳಾ ಕಾಂಗ್ರೆಸ್ ನಿಂತಿದೆ. ಒಬ್ಬ ರಾಜಕಾರಣಿಯಿಂದ ಆಕೆಗೆ ಅನ್ಯಾಯ ಆಗಿದ್ದರೂ ಸಂತ್ರಸ್ತೆಗೆ ಸರ್ಕಾರದಿಂದ ರಕ್ಷಣೆ ಕೊಡಲು ಸಾಧ್ಯವಾಗಿಲ್ಲ. ಸರ್ಕಾರದ ಮೇಲೆ ಆಕೆಗೆ ನಂಬಿಕೆ ಇಲ್ಲ, ಹಾಗಾಗಿ ಕಾಂಗ್ರೆಸ್ ನಾಯಕರ ಬಳಿ ರಕ್ಷಣೆ ಕೋರಿದ್ದಾಳೆ.

ಆ ಹೆಣ್ಣುಮಗಳ ರಕ್ಷಣೆಗೆ ನಾವಿದ್ದೇವೆ ಎಂದು ಕಾಂಗ್ರೆಸ್ ಶಾಸಕಿಯರು ಬೆಂಬಲ ಸೂಚಿಸಿದ್ದಾರೆ.

ಸಚಿವ ಡಾ.ಕೆ. ಸುಧಾಕರ್ ನೀಡಿದ್ದ ಏಕಪತ್ನಿವ್ರತಸ್ಥ ಹೇಳಿಕೆ ಖಂಡಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಶಾಸಕಿಯರು, ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ, ಶಾಸಕಿ ಲಕ್ಷ್ಮೀಹೆಬ್ಬಾಳ್ಕರ್ ಹೆಣ್ಣುಮಗಳು ನೊಂದಿದ್ದರೆ ನ್ಯಾಯ ಕೊಡಿಸುತ್ತೇವೆ. ನಾವೆಲ್ಲರೂ ಅವರಿಗೆ ನ್ಯಾಯ ಕೊಡಿಸುತ್ತೇವೆ ಎಂದರು.

ಶಾಸಕಿ ರೂಪಾ ಶಶಿಧರ್, ಆತಂಕದಲ್ಲಿ ಆ ಹೆಣ್ಣುಮಗಳು ಇರಬಹುದು. ಸಿಎಂ ಮತ್ತು ಸರ್ಕಾರದ ಬಗ್ಗೆಯೂ ಆಕೆಗೆ ನಂಬಿಕೆಯಿಲ್ಲ. ಆ ತಾಯಿಗೆ ನ್ಯಾಯ ಕೊಡಿಸುವ ಪ್ರಯತ್ನ ಮಾಡ್ತೇವೆ. ಆ ಹೆಣ್ಣುಮಗಳಿಗೆ ಅನ್ಯಾಯವಾಗಿದೆ. ಹಾಗಾಗಿಯೇ ನಾವು ಸದನದಲ್ಲಿ ಹೋರಾಟ ಮಾಡಿದ್ದು ಎಂದರು.

ಸಿಡಿ ಲೇಡಿಯಿಂದ ಮತ್ತೊಂದು ವಿಡಿಯೋ ರಿಲೀಸ್ : ಎಸ್‌ಐಟಿ ಮೇಲೆ ಗಂಭೀರ ಆರೋಪ

ಶಾಸಕಿ ಸೌಮ್ಯಾ ರೆಡ್ಡಿ, ಆ ಹೆಣ್ಣುಮಗಳು ಎಲ್ಲಿದ್ದಾಳೆ ಎನ್ನುವುದು ಗೊತ್ತಿಲ್ಲ. ಅವರನ್ನ ಪತ್ತೆ ಮಾಡುವುದಕ್ಕೆ ಆಗಿಲ್ಲ. ಈ ಬಿಜೆಪಿ ಸರ್ಕಾರದಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆಯಿಲ್ಲ. ಕೆಲಸ ಕೊಡಿಸಿ ಎಂದು ಬಂದ ಮಹಿಳೆಗೆ ಸಚಿವರು ಹೀಗೆಲ್ಲ ಮಾಡೋದಾದರೆ ಬಿಜೆಪಿ ಮೇಲೆ ಹೇಗೆ ನಂಬಿಕೆ ಬರುತ್ತೆ? ಎಂದು ಕಿಡಿಕಾರಿದರು.

error: Content is protected !!