‘ಕೃಷ್ಣನ ಆಣೆಗೂ ನಾನವಳಲ್ಲ’: ಸಿಡಿ ಕೇಸ್‌ ಸಂತ್ರಸ್ತೆ ಕಣ್ಣೀರು - BC Suddi
‘ಕೃಷ್ಣನ ಆಣೆಗೂ ನಾನವಳಲ್ಲ’: ಸಿಡಿ ಕೇಸ್‌ ಸಂತ್ರಸ್ತೆ ಕಣ್ಣೀರು

‘ಕೃಷ್ಣನ ಆಣೆಗೂ ನಾನವಳಲ್ಲ’: ಸಿಡಿ ಕೇಸ್‌ ಸಂತ್ರಸ್ತೆ ಕಣ್ಣೀರು

ಬೆಂಗಳೂರು: ನಾನು ನಂಬುವ ಕೃಷ್ಣನ ಮೇಲೆ ಆಣೆಗೂ ನಾನವಳಲ್ಲ ಎಂದು ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿಯಲ್ಲಿ ಇರುವ ಯುವತಿ ಎನ್ನಲಾದ ಸಂತ್ರಸ್ತೆ ತನ್ನ ತಾಯಿ ಮುಂದೆ ಕಣ್ಣೀರು ಇಟ್ಟಿದ್ದಾಳೆ.

ವಿಡಿಯೋ ಬಹಿರಂಗ ಆದ ಬಳಿಕ ಸಂತ್ರಸ್ತೆ ತನ್ನ ಕುಟುಂಬಸ್ಥರಿಗೆ ಫೋನ್ ಮಾಡಿ ಧೈರ್ಯ ತುಂಬಿದ್ದಾಳೆ ಎನ್ನಲಾಗಿರುವ ಆಡಿಯೋವೊಂದು ಇದೀಗ ಸಾಮಾಜಿಕ ಜಾಲತಾನದಲ್ಲಿ ಹರಿದಾಡುತ್ತಿದೆ. ಈ ಆಡಿಯೋದಲ್ಲಿ ಕೆಲ ಸ್ಫೋಟಕ ಮಾಹಿತಿ ಬಹಿರಂಗವಾಗಿದ್ದು, ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್ ಸಿಕ್ಕಿದೆ.

ಆಡಿಯೋದಲ್ಲಿ ಏನಿ?:
ಸಂತ್ರತ್ತೆಗೆ ಸೆರೀದ್ದು ಎನ್ನಲಾಗಿರುವ ಆಡಿಯೋದಲ್ಲಿ ಅವರು ತನ್ನ ತಮ್ಮನ ಜೊತೆ ಮಾತನಾಡುತ್ತ. “ನೀನಾದ್ರೂ ನನ್ ನಂಬು. ಯಾರೂ ಕೂಡ ನನ್ನ ನಂಬುತ್ತಿಲ್ಲ, ಎಲ್ಲರೂ ಡೌಟ್ ಪಡುತ್ತಿದ್ದಾರೆ. ವಿಡಿಯೋದಲ್ಲಿರೋದು ನಾನಲ್ಲ, ಗ್ರಾಫ್ರಿಕ್ಸ್​ನಿಂದ ಹಾಗೆ ಮಾಡಿ, ನನ್ನ ಧ್ವನಿಯನ್ನ ಮಾಡ್ಯುಲೇಷನ್ ಮಾಡಿದ್ದಾರೆ. ನೀನಾದರೂ ನನ್ನನ್ನ ನಂಬು. ನಿನ್ನ ಮೇಲೆ ಆಣೆಗೂ ಅದು ನಾನಲ್ಲ. ನಾನು ನಂಬುವ ಕೃಷ್ಣನ ಮೇಲೆ ಆಣೆಗೂ ನಾನು ಅವಳಲ್ಲ” ಎಂದು ಹೇಳಿದ್ದಾರೆ.

ನ್ಯೂಸ್​ನಲ್ಲಿ ತೋರಿಸುತ್ತಿರೋದೆಲ್ಲ ಗ್ರಾಫಿಕ್ಸ್ ಇದೆ ಚಿನ್ನಿ. ನಾನ್ಯಾಕೆ ಅಂತಹ ಕೆಲಸಕ್ಕೆ ಹೋಗುತ್ತೇನೆ ನೀನೇ ಹೇಳು ಚಿನ್ನಿ. ಸ್ವಲ್ಪ ನೀನೇ ಯೋಚನೆ ಮಾಡು ಎಂದು ಯುವತಿ ಹೇಳಿದಾಗ, ಅದು ಎಲ್ಲಾ ನಿಂದೇ ವಾಯ್ಸ್ ಐತಲ್ಲಾ..? ಆಡಿಯೋದಲ್ಲಿ, ಬಿಯರ್ ಕುಡಿತೀಯಾ ಅದು ಕುಡಿತೀಯಾ ಎಲ್ಲಾ ಎಂದು ತಮ್ಮ ಕೇಳುತ್ತಾನೆ. ಆಗ ಯುವತಿ, ಲೇ ಅದು ಒಲ್ಲೆ ಅಪ್ಪಾ ಅದು ನನ್ನ ವಾಯ್ಸ್, ಹುಡುಗಿ ಮಾತಾಡಿರೋದು. ಹುಡುಗಿ ಮಾತಾಡಿರೋದು ವಿಡಿಯೋ ಏನ್ ನಾನ್ ಕಳಿಸ್ತೀನಿ ಇರು ಎಂದು ಸ್ಪಷ್ಟನೆ ನೀಡುತ್ತಾರೆ.

ಅದಾದ ನಂತರ ತನ್ನ ಅಮ್ಮನ ಜೊತೆ ಮಾತನಾಡಿ, ಅವ್ವ ಅದು ನಾನಲ್ಲ, ನೀನಾದರೂ ನನ್ನ ನಂಬು. ನಿನ್ನ ಕಾಲಿಗೆ ಬೀಳ್ತೀನಿ. ಧೈರ್ಯದಿಂದ ಇರಿ, ನಾನು ಎಲ್ಲವನ್ನೂ ಕ್ಲೀಯರ್ ಮಾಡಿಕೊಂಡು ಬರ್ತೀನಿ ಎಂದಿರುವ ಆಡಿಯೋ ಇದೀಗ ಎಲ್ಲಡೆ ವೈರಲ್ ಆಗಿದೆ.

ರಾಯಚೂರು: ಕೆಮಿಕಲ್ ಫ್ಯಾಕ್ಟರಿಯಲ್ಲಿ ರಾಸಾಯನಿಕ ಸೋರಿಕೆ- ಓರ್ವ ಸಾವು, ಮೂವರ ಸ್ಥಿತಿ ಗಂಭೀರ

error: Content is protected !!