ಸಿಡಿ ಸಂತ್ರಸ್ತೆ ತಾಯಿ ಆಸ್ಪತ್ರೆಗೆ ದಾಖಲು - BC Suddi
ಸಿಡಿ ಸಂತ್ರಸ್ತೆ ತಾಯಿ ಆಸ್ಪತ್ರೆಗೆ ದಾಖಲು

ಸಿಡಿ ಸಂತ್ರಸ್ತೆ ತಾಯಿ ಆಸ್ಪತ್ರೆಗೆ ದಾಖಲು

ವಿಜಯಪುರ: ಮಾಜಿ ಸಚಿವ ರಮೇಶ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣದ ಸಂತ್ರಸ್ತೆ ತಾಯಿ ಆರೋಗ್ಯದಲ್ಲಿ ಏರುಪೇರು ಆಗಿದ್ದು, ಅವರನ್ನು ಚಿಕಿತ್ಸೆಗಾಗಿ ವಿಜಯಪುರಕ್ಕೆ ಕರೆದುಕೊಂಡು ಹೋಗಲಾಗಿದೆ.

ಯುವತಿಯ ತಾಯಿ ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದಾರೆ. ಕೈ-ಕಾಲು‌ ಬಾವು ಬಂದಿದ್ದು ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾದ ‌ಕಾರಣ ಚಿಕಿತ್ಸೆಗೆಂದು ಅವರ ಕಿರಿಯ ಮಗ ಕಾರ್​ನಲ್ಲಿ ಕರೆದೊಯ್ದಿದ್ದಾರೆ. ಅವರ ಭದ್ರತೆಗೆ ಓರ್ವ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ಮತ್ತು ಇನ್ನೊಬ್ಬರು ಕಾನ್ಸ್‌ಟೇಬಲ್​​ ಅವರನ್ನು ನಿಯೋಜಿಸಲಾಗಿದೆ.

error: Content is protected !!