ಡಿ. ಸುಧಾಕರ್ ಗೆ ಕಂಟಕವಾಗತ್ತಾ ಸಿಡಿ ಲೇಡಿ ಜೊತೆಗಿನ ಸಂಭಾಷಣೆ? - BC Suddi
ಡಿ. ಸುಧಾಕರ್ ಗೆ ಕಂಟಕವಾಗತ್ತಾ ಸಿಡಿ ಲೇಡಿ ಜೊತೆಗಿನ ಸಂಭಾಷಣೆ?

ಡಿ. ಸುಧಾಕರ್ ಗೆ ಕಂಟಕವಾಗತ್ತಾ ಸಿಡಿ ಲೇಡಿ ಜೊತೆಗಿನ ಸಂಭಾಷಣೆ?

ಬೆಂಗಳೂರು : ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವ ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಕೇಸ್ ಗೆ ಸದ್ಯ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಪ್ರಕರಣದಲ್ಲಿ ಮಾಜಿ ಸಚಿವ, ಚಿತ್ರದುರ್ಗ ಜಿಲ್ಲೆಯ ಡಿ. ಸುಧಾಕರ್ ಜತೆ ಯುವತಿ 35ಕ್ಕೂ ಅಧಿಕ ಬಾರಿ ದೂರವಾಣಿಯಲ್ಲಿ ಮಾತಾಡಿರುವುದು ಎಸ್ ಐಟಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಯುವತಿಯನ್ನು ಶನಿವಾರವೂ ಎಸ್ ಐಟಿ 5 ತಾಸು ವಿಚಾರಣೆ ನಡೆಸಿದೆ. ಪ್ರಕರಣಕ್ಕೆ ಸಂಬಂಧಿಸಿ ರಮೇಶ್ ಜಾರಕಿಹೊಳಿ ಅವರನ್ನು ವಶಕ್ಕೆ ಪಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಸಿ.ಡಿ. ಬಿಡುಗಡೆಗೆ ಮುನ್ನ ಯುವತಿಯ ಜತೆಗೆ ಸುಧಾಕರ್ ಹಣಕಾಸಿನ ವ್ಯವಹಾರ ನಡೆಸಿದ್ದಾರೆ ಎನ್ನಲಾಗಿದೆ.

2008ರಲ್ಲಿ ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿದ್ದ ಡಿ. ಸುಧಾಕರ್ ಆಗಿನ ಬಿಎಸ್ ವೈ ಸರಕಾರದಲ್ಲಿ ಸಚಿವರಾಗಿದ್ದರು. ಬಳಿಕ ಕಾಂಗ್ರೆಸ್ ಸೇರಿ 2013ರಲ್ಲಿ ಚಳ್ಳೆಕೆರೆ ಕ್ಷೇತ್ರದಿಂದ ಮತ್ತು 2018ರಲ್ಲಿ ಹಿರಿಯೂರಿನಿಂದ ಸ್ಪರ್ಧಿಸಿದ್ದರು. ಪ್ರಕರಣ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಸುಧಾಕರ್, ಎಸ್ ಐಟಿಯವರು ಶುಕ್ರವಾರ ಕರೆ ಮಾಡಿದ್ದರು.

ಸೋಮವಾರ ಅಥವಾ ಮಂಗಳವಾರ ಫೋನ್ ಮಾಡಿ ಬರುತ್ತೇನೆ. ಆ ಯುವತಿ ಜತೆ ನನಗೆ ಸಂಬಂಧವಿಲ್ಲ. ಹಣಕಾಸು ನಂಟು ಕೂಡ ಇಲ್ಲ. ನಾನು ಒಬ್ಬ ಮಾಜಿ ಸಚಿವ. ಒಬ್ಬ ವ್ಯಾಪಾರಸ್ಥ ಕೂಡ. ನನಗೆ ಹತ್ತಾರು ಕರೆಗಳು ಬರುತ್ತವೆ. ಆಕೆಯೂ ಕರೆ ಮಾಡಿರಬಹುದು. ಆಕೆಗೆ ಹತ್ತು ರೂಪಾಯಿ ಕೂಡ ಕೊಟ್ಟಿಲ್ಲ. ರಮೇಶ್ ಜಾರಕಿಹೊಳಿ ಆಪ್ತ ಸ್ನೇಹಿತರು. ಎಸ್ ಐಟಿ ಯಾವ ವಿಚಾರಕ್ಕೆ ಕರೆ ಮಾಡಿದ್ದಾರೆ ಎಂಬ ಬಗ್ಗೆ ಗೊತ್ತಾಗಿಲ್ಲ ಎಂದಿದ್ದಾರೆ.

error: Content is protected !!