ಸಿಡಿ ಕೇಸ್ : ಕನಕಪುರದ ಬಂಡೆ, ಲಕ್ಷ್ಮೀ ವಿರುದ್ದ ED ಗೆ ದೂರು - BC Suddi
ಸಿಡಿ ಕೇಸ್ : ಕನಕಪುರದ ಬಂಡೆ, ಲಕ್ಷ್ಮೀ ವಿರುದ್ದ ED ಗೆ ದೂರು

ಸಿಡಿ ಕೇಸ್ : ಕನಕಪುರದ ಬಂಡೆ, ಲಕ್ಷ್ಮೀ ವಿರುದ್ದ ED ಗೆ ದೂರು

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ರಾಸಲೀಲೆ ಸಿಡಿ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಸದ್ಯ ಬನಶಂಕರಿ ನಿವಾಸಿ ಶ್ರೀಧರ್ ಮೂರ್ತಿ ಎಂಬುವವರು ಡಿಕೆ ಶಿವಕುಮಾರ್, ಬೆಳಗಾವಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ವಿಜಯ್ ಮುಳಗುಂದ, ಶಂಕಿತ ಮಾಜಿ ಪತ್ರಕರ್ತ ನರೇಶ್ ಗೌಡ ಸೇರಿ ಐವರ ವಿರುದ್ಧ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದಾರೆ.

ಹನಿಟ್ರ್ಯಾಪ್ ಹಾಗೂ ಒಳಸಂಚಿಗೆ ಸುಮಾರು 500 ಕೋಟಿ ರೂ. ಅಕ್ರಮ ವ್ಯವಹಾರ ನಡೆದಿದ್ದು, ಇಸಿಐಆರ್ ದಾಖಲಿಸಿಕೊಂಡು ತನಿಖೆ ಮಾಡಬೇಕು ಎಂದು ಅವರು ದೂರಿನಲ್ಲಿ ಆಗ್ರಹಿಸಿದ್ದಾರೆ. ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಶಾಸಕ ರಮೇಶ್ ಜಾರಕಿಹೊಳಿ ನೀಡಿರುವ ದೂರು ಆಧರಿಸಿ ತನಿಖೆ ನಡೆಸಬೇಕು. ಸಿಡಿ ಪ್ರಕರಣದಲ್ಲಿ ಜಾರಕಿಹೊಳಿಯನ್ನು ಸಿಲುಕಿಸಲು ಹನಿಟ್ರ್ಯಾಪ್ ಮಾಡಲಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ.

error: Content is protected !!