ಇಂದು ವೈದ್ಯಕೀಯ ಪರೀಕ್ಷೆಗೆ ಹಾಜರಾದ ಸಿಡಿ ಲೇಡಿ..! - BC Suddi
ಇಂದು ವೈದ್ಯಕೀಯ ಪರೀಕ್ಷೆಗೆ  ಹಾಜರಾದ ಸಿಡಿ ಲೇಡಿ..!

ಇಂದು ವೈದ್ಯಕೀಯ ಪರೀಕ್ಷೆಗೆ ಹಾಜರಾದ ಸಿಡಿ ಲೇಡಿ..!

ಬೆಂಗಳೂರು: 28 ದಿನಗಳ ಕಾಲ ಅಜ್ಞಾತ ಸ್ಥಳದಲ್ಲಿದ್ದ ರಮೇಶ್ ಜಾರಕಿಹೊಳಿ ಸಿಡಿ ಯುವತಿ ಕೊನೆಗೂ ನಿನ್ನೆ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್​ಗೆ ಹಾಜರಾಗಿದ್ದಳು. ಇಂದು ವೈದ್ಯಕೀಯ ಪರೀಕ್ಷೆಗೆ ಸಿಡಿ ಲೇಡಿ ಹಾಜರಾಗಿದ್ದಾರೆ. ಬೆಂಗಳೂರಿನ ಶಿವಾಜಿ ನಗರದಲ್ಲಿರುವ ಬೌರಿಂಗ್‌ ಆಸ್ಪತ್ರೆಗೆ ಯುವತಿಯನ್ನು ಮಹಿಳಾ ತಂಡದವರು ಕರೆದುಕೊಂಡು ಬಂದಿದ್ದು, ಆಸ್ಪತ್ರೆಯ ಹಿರಿಯ ವೈದ್ಯಧಿಕಾರಿಗಳ ನೇತೃತ್ವದಲ್ಲಿ ರಕ್ತ ಪರೀಕ್ಷೆ ಸೇರಿದಂತೆ ಪ್ರಮುಖ ಪರೀಕ್ಷೆಯನ್ನು ನಡೆಸಲಿದ್ದಾರೆ.

ಇದೇ ವೇಳೆ ಪರೀಕ್ಷೆಯ ವಿವವರಗಳನ್ನು ನ್ಯಾಯಾಲಕ್ಕೆ ಮುಚ್ಚಿದ ಲಕೋಟೆಯಲ್ಲಿ ವೈದ್ಯರು ನೀಡಲಿದ್ದಾರೆ ಎನ್ನಲಾಗಿದೆ. ಇನ್ನೂ ಶಾಸಕ ರಮೇಶ್‌ ಜಾರಕಿಹೊಳಿ ಯವರ ವಿರುದ್ದ ಯುವತಿ ಗಂಭೀರ ಆರೋಪ ಮಾಡುತ್ತಿದ್ದು, ಈಗಾಗಲೇ ಇದಕ್ಕೆ ಸಂಬಂಧಪಟ್ಟಂತೆ ನ್ಯಾಯಾಲದಲ್ಲಿ ನಿನ್ನೆ ಹೇಳಿಕೆಯನ್ನು ನೀಡಿದ್ದಾರೆ. ಇದಲ್ಲದೇ ತನಿಖೆ ಭಾಗವಾಗಿ ಯುವತಿ ನೀಡಿರುವ ದೂರಿನ ಹಿನ್ನಲೆಯಲ್ಲಿ ಆಕೆಯನ್ನು ತನಿಖಾ ತಂಡದವರು ಕಾನೂನು ಎಲ್ಲಾ ಪ್ರಕ್ರಿಯೆಯನ್ನು ನಡೆಸುತ್ತಿದ್ದಾರೆ.

ಚ್ಯಾಟ್ ಹಿಸ್ಟರಿ, ಆಭರಣ ಕೊಡಿಸಿದ ಬಿಲ್ ಎಸ್‌ಐಟಿಗೆ ಸಾಕ್ಷಿಯಾಗಿ ನೀಡಲಿದ್ದಾರಾ ಸಿಡಿ ಲೇಡಿ?

error: Content is protected !!