ಬೆಂಗಳೂರು: ಸೆಕ್ಸ ಸಿ.ಡಿ ಪ್ರಕರಣದ ಕುರಿತಾಗಿ ಸಂತ್ರಸ್ತೆ ಎನ್ನಲಾದ ಯುವತಿಗೆ ನ್ಯಾಯಾಲಯಕ್ಕೆ ಹಾಜರಾಗಲು ಅವಕಾಶ ನೀಡಲಾಗಿದೆ. ಹೀಗಾಗಿ ಶೀಘ್ರದಲ್ಲಿ ಯುವತಿ ನ್ಯಾಯಾಲಯಕ್ಕೆ ಬಂದು ಹೇಳಿಕೆ ನೀಡುವ ಸಾಧ್ಯತೆ ಇದೆ.
ಯುವತಿ ಹೇಳಿಕೆ ದಾಖಲು ಮಾಡಿಕೊಳ್ಳುವಂತೆ ಕೋರಿ ಅವರ ಪರ ವಕೀಲರು, ನ್ಯಾಯಾಲಯದ ಉಪ ರಿಜಿಸ್ಟ್ರಾರ್ ಅವರಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಶೀಲನೆ ನಡೆಸಿದ್ದ ಉಪ ರಿಜಿಸ್ಟ್ರಾರ್, ಹೇಳಿಕೆ ದಾಖಲಿಸಿಕೊಳ್ಳಲು ಅನುಮತಿ ನೀಡಿದ್ದಾರೆ. ಅದರ ಆದೇಶ ಪ್ರತಿ ಪಡೆಯಲು ಜಗದೀಶ್ ಪರ ವಕೀಲರು, ನ್ಯಾಯಾಲಯಕ್ಕೆ ಬಂದಿದ್ದಾರೆ. ಪ್ರತಿ ಕೈ ಸೇರಿದ ನಂತರವೇ ಹೇಳಿಕೆ ದಾಖಲು ನಿಖರ ಸಮಯ ತಿಳಿಯಲಿದೆ. ಈ ಹಿನ್ನಲೆ ಮಹಿಳಾ ಅಧಿಕಾರಿಗಳು ಸೇರಿದಂತೆ 50ಕ್ಕೂ ಹೆಚ್ಚು ಸಿಬ್ಬಂದಿಯನ್ನು ಸ್ಥಳದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.